ಬಾಲಿವುಡ್ ನಟ, ಗಂಡ ಆಯುಷ್ಮಾನ್ ಖುರಾನಾರಿಂದ ಅಚಲ ಬೆಂಬಲ
ವಿಶ್ವ ಆರೋಗ್ಯ ದಿನದಂದು, ಬರಹಗಾರ್ತಿ ತಾಹಿರಾ ಕಶ್ಯಪ್ ಅವರು ತಾವು ಮತ್ತೊಮ್ಮೆ ಸ್ತನ ಕ್ಯಾನ್ಸರ್ಗೆ ಒಳಗಾಗಿರುವುದಾಗಿ ಬಹಿರಂಗಪಡಿಸಿದ್ದಾರೆ. 2018ರಲ್ಲಿ ಮೊದಲ ಬಾರಿ ಈ ಗಂಭೀರ ಕಾಯಿಲೆ ವಿರುದ್ಧ ಹೋರಾಟ ನಡೆಸಿದ್ದರು.
ಇನ್ಸ್ಟಾಗ್ರಾಮ್ನಲ್ಲಿಂದು ತಾಹಿರಾ ಭರವಸೆ, ಧೈರ್ಯ ಮತ್ತು ರೆಗ್ಯುಲರ್ ಸ್ಕ್ರೀನಿಂಗ್ಗಳ ಮಹತ್ವದ ಬಗ್ಗೆ ಪವರ್ಫುಲ್ ಸಂದೇಶ ಹಂಚಿಕೊಂಡಿದ್ದಾರೆ. ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರು ತಮ್ಮ ಪತ್ನಿ ತಾಹಿರಾಗೆ ಅಚಲ ಬೆಂಬಲ ವ್ಯಕ್ತಪಡಿಸಿದ್ದಾರೆ.
ತಾಹಿರಾ ಕಶ್ಯಪ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ, “ಏಳು ವರ್ಷಗಳ ತುರಿಕೆ ಅಥವಾ ನಿಯಮಿತ ತಪಾಸಣೆಯ ಶಕ್ತಿ, ನಾನು ಎರಡನೆಯದರೊಂದಿಗೆ ಮುಂದುವರಿಯಲು ಬಯಸುತ್ತೇನೆ. ರೆಗ್ಯುಲರ್ ಚೆಕ್ ಅಪ್ ಮಾಡಿಸಿಕೊಳ್ಳಬೇಕಾದ ಪ್ರತಿಯೊಬ್ಬರಿಗೂ ಅದನ್ನೇ ಸೂಚಿಸಲು ಬಯಸುತ್ತೇನೆ. ನನಗಿದು ಎರಡನೇ ರೌಂಡ್” ಎಂದು ಬರೆದುಕೊಂಡಿದ್ದಾರೆ.
ಪೋಸ್ಟ್ನ ಕ್ಯಾಪ್ಷನ್ನಲ್ಲಿ, “ಜೀವನ ನಿಮಗೆ ನಿಂಬೆಹಣ್ಣು ನೀಡಿದಾಗ, ನಿಂಬೆ ಪಾನಕವನ್ನು ತಯಾರಿಸಿ. ಅದು ನಿಮಗೆ ಹೆಚ್ಚಿನವುಗಳನ್ನು ನೀಡಿದರೆ, ಅವುಗಳನ್ನು ನಿಮ್ಮ ಮೆಚ್ಚಿನ ಕಾಲಾ ಖಟ್ಟಾ ಡ್ರಿಂಕ್ಗೆ ಹಿಂಡಿ” ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಪ್ರೀತಿ ಮತ್ತು ಬೆಂಬಲದ ಮಹಾಪೂರವನ್ನೇ ಸ್ವೀಕರಿಸಿದೆ. ವಿಶೇಷವಾಗಿ, ಅವರ ಪತಿಯಿಂದ. ಕಾಮೆಂಟ್ ಸೆಕ್ಷನ್ನಲ್ಲಿ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ, “ಮೈ ಹಿರೋ” ಎಂದು ತಿಳಿಸಿದ್ದಾರೆ. ರೆಡ್ ಹಾರ್ಟ್ ಎಮೋಜಿ ಮೂಲಕ ಪ್ರೀತಿಯ ಮಳೆ ಸುರಿಸಿದ್ದಾರೆ.
‘ಶರ್ಮಾಜಿ ಕಿ ಬೇಟಿ’ ನಿರ್ದೇಶನದ ಮೂಲಕ ಹೆಸರುವಾಸಿಯಾದ ತಾಹಿರಾ ಅವರಿಗೆ ಮೊದಲು ಸ್ತನ ಕ್ಯಾನ್ಸರ್ 0 ಹಂತದ ರೂಪವಾದ ಡಿಸಿಐಎಸ್ ಇರುವುದು ಪತ್ತೆಯಾಯಿತು. ಕಳೆದ ತಿಂಗಳು, ಕಿಮೊಥೆರಪಿಯ ಪರಿಣಾಮವಾಗಿ ತಲೆ ಬೋಳಿಸಿದ ತಮ್ಮ ಸ್ಪೂರ್ತಿದಾಯಕ ಫೋಟೋವನ್ನು ಮತ್ತು ಚಿಕಿತ್ಸಾ ಪ್ರಯಾಣದ ಕ್ಷಣಗಳನ್ನು ಅವರು ಹಂಚಿಕೊಂಡಿದ್ದರು.