ಲಿಂಗಸ್ಗೂರು : ಹಟ್ಟಿ ಚಿನ್ನದ ಗಣಿ ಪಟ್ಟಣ ಪಂಚಾಯತಿಯಲ್ಲಿ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಒಟ್ಟು 6 ಹೈ ಮಾಸ್ಕ್ ಲೈಟ್‌ಗಳನ್ನು ಹಾಕಲಾಗಿದ್ದು ಇಂದು ಅಧಿಕೃತವಾಗಿ ಹಟ್ಟಿ ಪಟ್ಟಣ ಪಂಚಾಯತಿಯ ಅಧ್ಯಕ್ಷರಾದ ಎಂ ಡಿ ಸಂಧಾನಿ ಅಧಿಕೃತವಾಗಿ ಚಾಲನೆ ನೀಡಿದರು.
ಹಟ್ಟಿ ಪಟ್ಟಣ ಪಂಚಾಯತಿಗೆ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಹಟ್ಟಿ ಪಟ್ಟಣದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಹೊತ್ತು ನೀಡುತ್ತಿರುವ ಇವರು ಎಲ್ಲಾ ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಂಡು ಹಲವಾರು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗಿದ್ದು ಅದರಂತೆ ಹಟ್ಟಿ ಪಟ್ಟಣದಲ್ಲಿ ಹೆಚ್ಚು ಅವಶ್ಯಕತೆ ಇರುವ ಸ್ಥಳಗಳನ್ನು ಆಯ್ಕೆ ಮಾಡಿ ಹೈ ಮಾಸ್ಕ್ ಲೈಟ್ ಗಳನ್ನು ಹಾಕಲಾಗಿದೆ
ಹಟ್ಟಿ ಪಟ್ಟಣದ ಪಾಮನಕಲ್ಲೂರು ಕ್ರಾಸ್ ಮುಖ್ಯರಸ್ತೆಯ ಬದಿ, ಜಾಮಿಯಾ ಮಜೀದ್, ಅಮರ ಗುಂಡಪ್ಪ ಸರ್ಕಲ್ ಹಳೇ ಪಂಚಾಯತ್ , ಬುಡ್ಡೆಕಲ್ಲ ಸರ್ಕಲ್, ಹುಚ್ಚು ಬುಡ್ಡಪ್ಪ ಗದ್ದಿಗೆ, ಮತ್ತು ಹಟ್ಟಿ ಪಟ್ಟಣದ ಈದ್ಗ ಮೈದಾನದಲ್ಲಿ ಸೇರಿದಂತೆ ಆರು ಹೈ ಮಾಸ್ಕ್ ಲೈಟ್ ಗಳನ್ನು ಹಾಕಲಾಗಿದ್ದು, ಅಧಿಕೃತವಾಗಿ ಇಂದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅವರ ಜೊತೆಗೆ ಹಟ್ಟಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾದ ನಾಗರತ್ನ ಗುರಿಕಾರ್, ಸದಸ್ಯರಾದ ರಂಗನಾಥ್ ಮುಂಡರಗಿ, ರೇಣುಕಮ್ಮ, ಬಾಬು ನಾಯ್ಕೋಡಿ, ಸಿರಾಜುದ್ದೀನ್ ಖುರೇಷಿ ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿಯಾದ ವೆಂಕೋಬ್, ನಾಗರಾಜ್, ಮಾಳಪ್ಪ, ಗುತ್ತಿಗೆದಾರ ರಾಜು ಉಪಸ್ಥಿತರಿದ್ದರು.




