ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಅವರ ಉಸ್ತುವಾರಿ ಜಿಲ್ಲೆಯಾದ ಕಲಬುರಗಿ ವ್ಯಾಪ್ತಿಯ ಕಾಳಗಿ ವಿಧಾನಸಭಾ ಕ್ಷೇತ್ರದ ತಾಲೂಕು ಮಟ್ಟದ 05ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಅಧ್ಯಕ್ಷರಾಗಿ ರಾಘವೇಂದ್ರ ಗುತ್ತೇದಾರ ಮತ್ತು ಸದಸ್ಯರಾಗಿ ಕಲ್ಯಾಣರಾವ್ ಡೊಣ್ಣೂರು ಮತ್ತು ದಿನೇಶ್ ತಳವಾರ್ ಮೋಘಾ ಅವರು ಆಯ್ಕೆ ಆಗಿರುವುದರಿಂದ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರ 134ನೇ ಜಯಂತೋತ್ಸವ ಸಮಿತಿ ವತಿಯಿಂದ, ಸನ್ಮಾನಿಸಿಲಾಯಿತು, ಈ ಸಂದರ್ಭದಲ್ಲಿ :ಡಾ ಬಾಬಾ ಸಾಹೇಬ ಅಂಬೇಡ್ಕರ್ ರವರ 134ನೇ ಜಯಂತೋತ್ಸವ ಸಮಿತಿ ಯ ಗೌರವಧ್ಯಕ್ಷರಾದ ಸಂತೋಷ ನರನಾಳ್, ಅಧ್ಯಕ್ಷ ಗಂಗಾಧರ್ ಮಾಡಬೂಳ್,ಉಪಾಧ್ಯಕ್ಷ ಅಂಬರೀಷ್ ಮೊಘಾ, ಕೋಶ ಅಧ್ಯಕ್ಷರಾದ ಕಪಿಲ್ ಎಸ್ ದೊಡ್ಡಮನಿ,ಪ್ರಚಾರ ಸಮಿತಿ ಅಧ್ಯಕ್ಷ ರತನ್ ಕನ್ನಡಿಗಿ, ದಲಿತ ಹಿರಿಯ ಮುಖಂಡ ಶಂಕರ್ ಹೇರೂರ್, ಮಲ್ಲಿಕಾರ್ಜುನ ಗಂವಾರ ದಸಂಸ ತಾಲೂಕ ಸಂಚಾಲಕರು, ಸಿದ್ದು ನಾಗೂರ್ ಡಾ ಬಾಬಾ ಸಾಹೇಬ ಅಂಬೇಡ್ಕರ್ 132ನೇ ಜಯಂತಿ ಸಮಿತಿ ಮಾಜಿ ಅಧ್ಯಕ್ಷ, ಹಾಗೂ ಬಾಬುರಾವ ಡೊಣ್ಣೂರು, ಮೋಹನ ಚಿನ್ನ, ಕಾಶೀನಾಥ್ ವಚ್ಚ, ಮಾರುತಿ ತೇಗಲತ್ತಿಪ್ಪಿ, ಮಂಜುನಾಥ್ ದಂಡಿನ,ಜೈಭೀಮ್ ಜಂಬಗಾ ಇದ್ದರು ಈ ಸಂದರ್ಭದಲ್ಲಿ : 05ಗ್ಯಾರಂಟಿ ಯೋಜನೆಗೆ ಆಯ್ಕೆ ಮಾಡಿರುವುದರಿಂದ ದಿನೇಶ್ ತಳವಾರ್ ಅವರು, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಯವರಿಗೂ, ಸುಭಾಷ್ ವ್ಹಿ ರಾಠೋಡ್ ಅವರಿಗೂ ಮತ್ತು ಭೀಮರಾವ್.ಟಿ. ಟಿ ಅವರಿಗೂ ಈ ವೇಳೆ ಧನ್ಯವಾದ ತಿಳಿಸಿದರು.
ವರದಿ : ಹಣಮಂತ ಕುಡಹಳ್ಳಿ