ಯಾದಗಿರಿ: ಸಹಜವಾಗಿ ಜೀವನದಲ್ಲಿ ಎಲ್ಲ ಹಂತಗಳನ್ನು, ಸುಖ ಸಂತೋಷಗಳನ್ನು ನೋಡಿ ಕೆಲವರು ಸನ್ಯಾಸತ್ವ ಸ್ವೀಕರಿಸಿದ ಕಥೆ ಕೇಳಿದ್ದೇವೆ.
ಅದರಲ್ಲೂ ಸನ್ಯಾಸತ್ವ ಸ್ವೀಕಾರ ಮಾಡುವುದರಲ್ಲಿ ಪುರುಷರು ಮುಂದು, ಆದರೆ ವಿಚಿತ್ರದಲ್ಲಿ ವಿಚಿತ್ರ ಎಂಬಂತೆ ಕೇವಲ 26 ವಯಸ್ಸಿಗೇ ನಿಖಿತಾ ಎಂಬ ಯುವತಿ ಜೈನ ಸನ್ಯಾಸತ್ವ ಸ್ವೀಕಾರಕ್ಕೆ ಮುಂದಾಗಿದ್ದಾಳೆ.
ಆಕೆ ಮನಸ್ಸು ಮಾಡಿದ್ದಾರೆ ಅತ್ಯಂತ ವೈಭವದ ಜೀವನ ಮಾಡಬಹುದಿತ್ತು. ಆದರೆ ಆಕೆ ಸನ್ಯಾಸತ್ವ ಸ್ವೀಕಾರ ಮಾಡಲು ನಿರ್ಧಾರ ಮಾಡಿದ್ದಾಳೆ.
ಅದರಲ್ಲೂ ಈಕೆ ಒಬ್ಬ ಕೋಟ್ಯಧಿಪತಿಯ ಮಗಳು ಎಂಬುದು ವಿಶೇಷ. ಈಕೆಯ ತಂದೆ ನರೇಂದ್ರ ಗಾಂಧಿಗೆ ಇಬ್ಬರು ಮಕ್ಕಳಿದ್ದು, ಒಬ್ಬ ಪುತ್ರನಿದ್ದಾನೆ. ಇವರು ಯಾದಗಿರಿಯ ಜೈನ್ ಬಡವಾಣೆಯಲ್ಲಿ ವಾಸಿಯಾಗಿದ್ದಾರೆ.
ನಿಖಿತಾಗೆ ಕಳೆದ 7 ವರ್ಷದಿಂದ ಸನ್ಯಾಸಿನಿಯಾಗಬೇಕೆಂಬ ಆಸೆಯಿದ್ದು, ಈಗ ಆ ಆಸೆ ಈಡೇರಿದೆ. ಸನ್ಯಾಸಿನಿಯಾಗಬೇಕಾದರೆ ಎಲ್ಲವನ್ನ ತ್ಯಾಗ ಮಾಡಬೇಕು. ಕಾಲಿಗೆ ಚಪ್ಪಲಿ, ಸಂಚಾರ ಮಾಡಲು ವಾಹನ, ಹೊಸಬಟ್ಟೆ ಹೀಗೆ ಯಾವುದಕ್ಕೂ ಆಸೆ ಪಡದೇ ಜೀವನ ಸಾಗಿಸಬೇಕಾಗುತ್ತದೆ.
ಇದಕ್ಕಾಗಿಯೇ ನಿಖಿತಾ ತನ್ನ ಜೊತೆಯಿರುವ ಎಲ್ಲ ಬಟ್ಟೆಗಳನ್ನು, ವಸ್ತುಗಳನ್ನ ದಾನ ಮಾಡುತ್ತಿದ್ದಾರೆ. ನಿಖಿತಾ ಸನ್ಯಾಸಿನಿ ಆಗುತ್ತಿರುವುದಕ್ಕೆ ಅವರ ಸಂಬಂಧಿಗಳು ಅದ್ದೂರಿಯಾಗಿ ಮೆರವಣಿಗೆ ಮಾಡಿದ್ದಾರೆ.