ಚಿಕ್ಕೋಡಿ:-ಮಹಾರಾಷ್ಟ್ರದ ಕೊಂಕಣ ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಪರಿಣಾಮವಾಗಿ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರ ವೀರಭದ್ರೇಶ್ವರ ದೇವಸ್ಥಾನದ ಗರ್ಭಗುಡಿ ಸಂಪೂರ್ಣವಾಗಿ ಜಲಾವೃತಗೊಂಡಿದೆ.
ಹೌದು ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿ ನೀರು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದಾಗಿ ನದಿ ತೀರದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.
ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರಿನ ಪೌರಾಣಿಕ ಹಿನ್ನೆಲೆಯುಳ್ಳಂತಹ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಗರ್ಭಗುಡಿ ಒಳಗೆ ಕೃಷ್ಣಾ ನದಿ ನೀರು ಪ್ರವೇಶಿಸಿದೆ.ಇದರಿಂದ ವೀರಭದ್ರೇಶ್ವರ ದರ್ಶನವು ಸಂಪೂರ್ಣವಾಗಿ ಬಂದಾಗಿದೆ. ಇದು ಭಕ್ತರಿಗೆ ನಿರಾಶೆ ಉಂಟುಮಾಡಿದೆ.
ನಿನ್ನೆ ರಾತ್ರಿ 10.30 ಕ್ಕೆ ದೇವಸ್ಥಾನದ ದಕ್ಷಿಣದ ಬಾಗಿಲಿನಿಂದ ಕೃಷ್ಣಾ ನದಿ ನೀರು ಪ್ರವೇಶಿಸಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಗರ್ಭಗುಡಿಗೆ ನೀರು ಪ್ರವೇಶಿಸಿದೆ. ಇದರಿಂದ ಶ್ರೀ ವೀರಭದ್ರೇಶ್ವರ ದೇವರಿಗೆ ಕೃಷ್ಣಾ ನದಿಯ ನೀರು ಜಲಾಭಿಷೇಕವಾಗಿದೆ.
ಗರ್ಭಗುಡುಗೆ ನೀರು ಪ್ರವೇಶಿಸುತ್ತಿದ್ದಂತೆ ಅರ್ಚಕರು ಪೂಜೆ, ಆರತಿಯನ್ನು ನೆರವೇರಿಸಿ ಸಕಲವಾದ್ಯಮದೊಂದಿಗೆ ಅತ್ಯಂತ ಭಕ್ತಿ ಭಾವದಿಂದ ಶ್ರೀವೀರಭದ್ರೇಶ್ವರ ಹಾಗೂ ಶ್ರೀ ಭದ್ರಕಾಳೇಶ್ವರಿ ದೇವರುಗಳನ್ನು ಶ್ರೀಕಾಡಸಿದ್ದೇಶ್ವರ ಮಠಕ್ಕೆ ತರಲಾಯಿತು.
ಒಟ್ಟಿನಲ್ಲಿ ಕರ್ನಾಟಕ, ಮಹಾರಾಷ್ಟ್ರದ ಹಾಗೂ ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳ ಭಕ್ತರ ಆರಾಧ್ಯ ದೈವ ಆಗಿರುವಂತಹ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಗರ್ಭಗುಡಿಗೆ ನೀರು ಪ್ರವೇಶಿಸಿ ದರ್ಶನವನ್ನು ಸಂಪೂರ್ಣವಾಗಿ ಬಂದಾಗಿದೆ. ಇದರಿಂದ ಭಕ್ತರಿಗೆ ಸಹಜವಾಗಿ ನಿರಾಶೆ ಉಂಟಾಗಿದೆ.
ವರದಿ:- ರಾಜು ಮುಂಡೆ