Ad imageAd image

ಆಗಸ್ಟ್ 19 ರಂದು ಅರೆಮಲ್ಲೇನಹಳ್ಳಿ ಬೆಟ್ಟದಲ್ಲಿ ಯಜುರ್ ಉಪಾಕರ್ಮ

Bharath Vaibhav
ಆಗಸ್ಟ್ 19 ರಂದು ಅರೆಮಲ್ಲೇನಹಳ್ಳಿ ಬೆಟ್ಟದಲ್ಲಿ ಯಜುರ್ ಉಪಾಕರ್ಮ
WhatsApp Group Join Now
Telegram Group Join Now

ತುರುವೇಕೆರೆ: –ತಾಲ್ಲೂಕಿನ ಅರೆಮಲ್ಲೇನಹಳ್ಳಿ ಶ್ರೀ ರಂಗನಾಥಸ್ವಾಮಿ ಬೆಟ್ಟದಲ್ಲಿ ಶ್ರೀವೈಷ್ಣವ ಸಭಾದಿಂದ ಆಗಸ್ಟ್ 19 ರಂದು ಯಜುರ್ ಉಪಾಕರ್ಮ ಆಯೋಜಿಸಲಾಗಿದೆ ಎಂದು ದೇವಸ್ಥಾನದ ಅರ್ಚಕ‌ ಮುರುಳೀಧರ್ ತಿಳಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಉಪಾಕರ್ಮ ಆಯೋಜಿಸಿದ್ದು, ತಾಲ್ಲೂಕಿನ ಎಲ್ಲಾ ಶ್ರೀವೈಷ್ಣವ ಸಭಾದ ಪದಾಧಿಕಾರಿಗಳು, ಬಾಂದವರು ಆಗಮಿಸಿ ಉಪವೀತ ಧಾರಣೆ ಮಾಡಲಿದ್ದಾರೆ ಎಂದರು.

ಸ್ವಾಮಿಯ ಸನ್ನಿಧಿಯಲ್ಲಿ ನಡೆಯುವ ಈ ಯಜುರ್ ಉಪಾಕರ್ಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಉಪವೀತ (ಜನಿವಾರ) ಧಾರಣೆ ಮಾಡುವ ಶ್ರೀವೈಷ್ಣವ ಬಂಧುಗಳು ಬೆಳಿಗ್ಗೆ 8 ಗಂಟೆಗೆ ಬೆಟ್ಟದಲ್ಲಿನ ಸ್ವಾಮಿ ಸನ್ನಿಧಿಯಲ್ಲಿ ಹಾಜರಿರಬೇಕೆಂದು ತಿಳಿಸಿದ್ದಾರೆ.

ವರದಿ: ಗಿರೀಶ್ ಕೆ‌ ಭಟ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!