Ad imageAd image

ಯಮಕನಮರಡಿ: ಕಾಮಗಾರಿಗಳಿಗೆ ಸಂಸದರಿಂದ ಚಾಲನೆ

Bharath Vaibhav
ಯಮಕನಮರಡಿ: ಕಾಮಗಾರಿಗಳಿಗೆ ಸಂಸದರಿಂದ ಚಾಲನೆ
WhatsApp Group Join Now
Telegram Group Join Now

ಯಮಕನಮರಡಿ: ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕ ಜಾರಕಿಹೊಳಿ ಇವರು ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನದಡಿ, ₹ 7.00 ಕೋಟಿ ವೆಚ್ಚದಲ್ಲಿ SHDP ಹಂತ-5 (ಹಂತ-1) ಯೋಜನೆಯಡಿ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಇಂದು ಚಾಲನೆ ನೀಡಿದರು. ಈ‌ ಸಂದರ್ಭದಲ್ಲಿ ಗ್ರಾಮದ ‌ಮುಖಂಡರು ಮತ್ತು ಹಿರಿಯರು ಉಪಸ್ಥಿತರಿದ್ದರು.

ಕಾಮಗಾರಿಗಳ ವಿವರ:
➡️ PKG-810 (A): SH-141 ಮಹಾರಾಷ್ಟ್ರ ಗಡಿ – ರಕ್ಕಸಕೊಪ್ಪ – ಸುತಗಟ್ಟಿ (NH-4) ರಸ್ತೆ (ಚೆ. 25.025 ಕಿಮೀ ರಿಂದ 27.00 ಕಿಮೀ ವರೆಗೆ) ಸುಧಾರಣೆ

➡️ PKG-810 (B): SH-141 ರಿಂದ ಬೋಡ್ಕ್ಯಾನಟ್ಟಿ – ಕಟ್ಟಣಭಾವಿ – ಬಂಬರ್ಗಾ ದೇವಗಿರಿ – ಬೆನ್ನಾಳ್ಳಿ (NH-4) – ಜಾಫರ್‌ವಾಡಿ ಕ್ರಾಸ್ (MDR) ರಸ್ತೆ (ಚೆ. 0.00 ಕಿಮೀ ರಿಂದ 2.00 ಕಿಮೀ ಮತ್ತು 8.50 ಕಿಮೀ ರಿಂದ 11.95 ಕಿಮೀ ವರೆಗೆ) ಸುಧಾರಣೆ

ಈ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡು ಗ್ರಾಮೀಣ ಪ್ರದೇಶದ ಸಂಚಾರ ವ್ಯವಸ್ಥೆ ಸುಧಾರಣೆಗೊಳ್ಳುವುದರ ಜೊತೆಗೆ, ವ್ಯಾಪಾರ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಹೊಸ ವೇಗ ನೀಡಲಿದೆ.

ವರದಿ: ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!