ನಟ ಯಶ್ ಅವರು ಸಾಲು ಸಾಲು ಸಿನೆಮಾದಲ್ಲಿ ಬ್ಯುಸಿಯಾಗಿದ್ದು, ಟಾಕ್ಸಿಕ್ ಶೂಟಿಂಗ್ ಬಳಿಕ ರಾಮಾಯಣ ಚಿತ್ರದಲ್ಲಿ ರಾವಣನ ಪಾತ್ರ ಮಾಡಲಿದ್ದಾರೆ. ಇದಕ್ಕೂ ಮೊದಲು ಉಜ್ಜನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ನಟ ಯಶ್ ಗೆ ದೇವರ ಮೇಲೆ ಭಕ್ತಿ ಎಷ್ಟಿದೆ ಎಂದು ಎಲ್ಲರಿಗೂ ಗೊತ್ತಿದೆ.ಯಾವುದೇ ಕೆಲಸ ಆರಂಭ ಮಾಡುವ ಮುನ್ನ ದೇವರಿಗೆ ವಿಶೇಷ ಪೂಜೆ ಮಾಡುತ್ತಾರೆ. ಇದೀಗ ರಾಮಾಯಣದಲ್ಲಿ ರಾವಣನಂತಹ ಹೊಸ ಪಾತ್ರ ಬಣ್ಣ ಹಚ್ಚಲಿದ್ದು, ಅದಕ್ಕೂ ಮುನ್ನ ಉಜ್ಜನಿಯ ಮಹಾಕಾಳೇಶ್ವರನ ದರ್ಶನ ಪಡೆದಿದ್ದಾರೆ.
ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ರಾಮಾಯಣದಲ್ಲಿ ಚಿತ್ರದಲ್ಲಿ ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಈಗಾಗಲೇ ರಾಮಾಯಣ ಕಾವ್ಯ ನಾಟಕ, ಧಾರಾವಾಹಿ ಹಾಗೂ ಸಿನಿಮಾ ರೂಪದಲ್ಲಿ ಪ್ರೇಕ್ಷಕರ ಮುಂದೆ ಬಂದಿದೆ. ಆದರೆ ಅದೇ ಕಥೆಯನ್ನು ಮತ್ತೊಮ್ಮೆ ಅದ್ಧೂರಿಯಾಗಿ ತೆರೆಗೆ ತರುವ ಪ್ರಯತ್ನ ನಡೀತಿದೆ.
ಸದ್ಯ ಶೂಟಿಂಗ್ ಮುನ್ನ ನಟ ಯಶ್ ಉಜ್ಜನಿಯ ಮಹಾಕಾಳೇಶ್ವರನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದು, ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.