ನಿಪ್ಪಾಣಿ :ತಾಲೂಕಿನ ಶಿರದವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಉತ್ತಮ್ ಪಾಟೀಲ್ ಗುಂಪಿನ ಯಾಸ್ಮಿನ್ ಚಾವುಸ್ ಅವಿರೋಧ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಏಕ ಮಾತ್ರ ಅರ್ಜಿ ಬಂದಿದ್ದರಿಂದ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು.
ಚುನಾವಣಾ ಅಧಿಕಾರಿಯಾಗಿ ನಗರ ಪಂಚಾಯಿತಿ ಸಹಾಯಕ ನಿರ್ದೇಶಕರಾದ ಯಶೋಧ ಉಳ್ಳಿಕಾಶಿ ಕಾರ್ಯನಿರ್ವಹಿಸಿದರು. ಅಧ್ಯಕ್ಷ ಸ್ಥಾನದ ಆಯ್ಕೆಯ ಘೋಷಣೆಯಾಗುತ್ತಿದ್ದಂತೆ ಅಭಿಮಾನಿಗಳಿಂದ ಪಟಾಕ್ಷಿ ಹಾರಿಸಿ ಸಿಹಿ ಹಂಚಿ ಆನಂದೋತ್ಸವ ಆಚರಿಸಿದರು.8 ಗ್ರಾಮ ಪಂಚಾಯಿತಿ ಸದಸ್ಯರಿರುವ ಶಿರಾದವಾಡ ಗ್ರಾಮ ಪಂಚಾಯಿತಿ ಮಾದರಿಯಾಗಿದೆ. ಎಲ್ಲ ಸದಸ್ಯರಿಗೆ ಮೀಸಲು ಸ್ಥಾನಕ್ಕೆ ಅನುಗುಣವಾಗಿ ಅಧ್ಯಕ್ಷ ಸ್ಥಾನ ದೊರೆಯಲೆಂಬ ಉದ್ದೇಶದಿಂದ ಪಕ್ಷಭೇದ ಮರೆತು ಎಲ್ಲ ಸದಸ್ಯರು ಒಮ್ಮತದ ನಿರ್ಣಯ ತೆಗೆದುಕೊಂಡು ಬಿಜೆಪಿ ಹಾಗೂ ರಾಷ್ಟ್ರವಾದಿ ಕಾಂಗ್ರೆಸ್ಸಿನ ಎಲ್ಲ ಸದಸ್ಯರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಎರಡನೇ ಹಂತದ ಹಾಗೂ ಕೊನೆಯ ಕಾಲಾವಧಿಗಾಗಿ ಯಾಸ್ಮಿನ್ ಚಾವುಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಸಭೆಯ ಪ್ರಾರಂಭದಲ್ಲಿ ಪಿಡಿಒ ನಾಗರಾಜ್ ಶಿಂಧೆ ಚುನಾವಣೆಯ ಕಾರ್ಯವೈಖರಿ ವಿವರಿಸಿದರು ತದ ನಂತರ ಚುನಾವಣಾ ಅಧಿಕಾರಿಗಳು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಅಭ್ಯರ್ಥಿಯನ್ನು ಘೋಷಿಸಿದರು.

ಗ್ರಾಮ ಪಂಚಾಯಿತಿ ವತಿಯಿಂದ ನೂತನ ಹಾಗೂ ಮಾಜಿ ಅಧ್ಯಕ್ಷರಿಗೆ ಶಾಲ ಶ್ರೀ ಫಲ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷೆ ಯಾಸ್ಮಿನ ಚಾವುಸ್ ಮಾತನಾಡಿ ಪಕ್ಷಭೇದ ಬದಿಗಿಟ್ಟು ಗ್ರಾಮದ ಅಭಿವೃದ್ಧಿಗಾಗಿ ಎಲ್ಲ ಸದಸ್ಯರ ಸಹಕಾರ್ಯದಿಂದ ಶ್ರಮಿಸುವುದಾಗಿ ತಿಳಿಸಿದರು ಈ ಸಂದರ್ಭದಲ್ಲಿ ಉಪಾಧ್ಯಕ್ಷ ಅಣ್ಣಾ ಪಾಟೀಲ್ ಗ್ರಾಮ ಲೆಕ್ಕಾಧಿಕಾರಿ ಸಂಜಯ ನೇಮಣ್ಣವರ, ಸದಸ್ಯರಾದ ವಿಜಯ್ ರೋಹಿದಾಸ್, ಸುರೇಶ್ ಖೋತ್, ದೀಕ್ಷಿತಾ ಕಾಂಬಳೆ, ಜಯಶ್ರೀ ಪಾಟೀಲ, ಶೀತಲ ಲಡಗೆ, ರಾಮಗೊಂಡಾ ಪಾಟೀಲ, ಚಿಂತಾಮಣಿ ಪಾಟೀಲ, ಕುಮಾರ ಪಾಟೀಲ, ಜೀವಂಧರ್ ಫಿರಘಣ್ಣವರ,ಪೋಪು ಪಾಟೀಲ, ಸುಭಾಷ್ ಪಾಟೀಲ, ಕಿರಣ ಪಾಟೀಲ, ಜಾಫರ್ ಮುಜಾವರ, ನಜಿರ್, ಸಮೀರ್, ಹಾಗೂ ಜಮೀರ್ ಚಾವುಸ್,ಸೇರಿದಂತೆ ರಾಷ್ಟ್ರವಾದಿ, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ




