Ad imageAd image

ಭಾರತವನ್ನು ಎಂದಿಗೂ ಹಿಂದೂ ರಾಷ್ಟ್ರವಾಗಿ ಮಾಡಲು ಬಿಡುವುದಿಲ್ಲ : ಯತೀಂದ್ರ ಸಿದ್ದರಾಮಯ್ಯ 

Bharath Vaibhav
ಭಾರತವನ್ನು ಎಂದಿಗೂ ಹಿಂದೂ ರಾಷ್ಟ್ರವಾಗಿ ಮಾಡಲು ಬಿಡುವುದಿಲ್ಲ : ಯತೀಂದ್ರ ಸಿದ್ದರಾಮಯ್ಯ 
WhatsApp Group Join Now
Telegram Group Join Now

ಮೈಸೂರು : ರಾಜ್ಯದಲ್ಲಿ ವಕ್ಫ್ ಬೋರ್ಡ್ ವಿಚಾರದಿಂದ ಧರ್ಮ ದಂಗಲ್ ಆರಂಭವಾಗಿದ್ದು, ಈ ಮಧ್ಯೆ ಯತೀಂದ್ರ ಸಿದ್ದರಾಮಯ್ಯ ಭಾರತವನ್ನು ನಾವು ಎಂದಿಗೂ ಹಿಂದೂ ರಾಷ್ಟ್ರವಾಗಿ ಮಾಡಲು ಬಿಡುವುದಿಲ್ಲ ಎಂದು ಹೇಳುವ ಮೂಲಕ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ.

ಈ ಬಗ್ಗೆ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವರು ತಮ್ಮ ರಾಜಕೀಯ ಲಾಭಕ್ಕಾಗಿ ಭಾರತ ದೇಶವನ್ನು ಹಿಂದೂ ರಾಷ್ಟ್ರವಾಗಿ ಮಾಡಬೇಕು ಎಂದು ಹೇಳುತ್ತಿದ್ದಾರೆ, ಆದರೆ ಅದಕ್ಕೆ ನಾವು ಬಿಡಲ್ಲ ಎಂದು ಹೇಳಿದರು.

ಭಾರತದಂತಹ ದೇಶವನ್ನು ಹಿಂದೂಗಳ ದೇಶವಾಗಿ ಮದುವುದುದಕ್ಕೆ ನಾವು ಬಿಡಬಾರದು, ಅಂಬೇಡ್ಕರ್ ಸಂವಿಧಾನ ಇರುವವರೆಗೂ ಹಿಂದೂ ರಾಷ್ಟ್ರ ನಿರ್ಮಾಣ ಅಸಾಧ್ಯ. ಸಾರ್ವಜನಿಕವಾಗಿ ನಾವು ನೆಮ್ಮದಿಯಾಗಿರಬೇಕೆಂದರೆ ಸಂವಿಧಾನವನ್ನ ನಾವು ರಕ್ಷಣೆ ಮಾಡಬೇಕು ಎಂದು ಯತಿಂದ್ರ ಹೇಳಿದರು.

ಭಾರತ ಎಲ್ಲಾ ಧರ್ಮವನ್ನು ಪರಿಪಾಲಿಸುವ ಹಾಗೂ ವಿವಿಧ ಏಕತೆಯನ್ನು ಸಾರುವ ದೇಶವಾಗಿದೆ. ಇದರಿಂದಲೆ ಭಾರತಕ್ಕೆ ವಿಶೇಷ ಸ್ಥಾನಮಾನ ನೀಡಲಾಗುತ್ತದೆ. ಹೀಗಿರುವ ಭಾರತವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತನೆ ಮಾಡಿದರೆ ಅದಕ್ಕಿರುವ ಬೆಲೆ ಹೋಗುತ್ತದೆ ಎಂದು ಹೇಳಿದರು.

ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಬಹಳ ಸದೃಢವಾಗಿದೆ. ಕೆಲವು ಜನ ಮಾತ್ರ ಒಂದು ಧರ್ಮದ ರಾಷ್ಟ್ರವಾಗಬೇಕೆಂದು ಬಯಸುತ್ತಿದ್ದಾರೆ.

ಭಾರತವನ್ನು ಒಂದು ಧರ್ಮದ ರಾಷ್ಟ್ರ ಮಾಡಲು ಹೊರಟಿರುವುದು ಬಹಳ ಅಪಾಯಕಾರಿ. ಇದಕ್ಕೆ ನಾವು ಯಾರೂ ಸಹ ಬಿಡಬಾರದು ಎಂದು ಹೇಳುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!