ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆ. ವಿಜಯೇಂದ್ರ ಮತ್ತು ಯತ್ನಾಳ್ ಬಣಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್‌ನಲ್ಲಿ ಭಿನ್ನಮತ ಶಮನಗೊಂಡಿದ್ದರೆ, ಬಿಜೆಪಿಯಲ್ಲಿ ಹೊಸದಾಗಿ ಟೆನ್ಶನ್ ಶುರುವಾಗಿದೆ.
ಬೆಂಗಳೂರು (ಜ.21): ಭಿನ್ನಮತದ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದೆ ಕಮಲ ಪಕ್ಷ.. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ.. ಶುರುವಾಯ್ತು ಮತ್ತೊಂದು ಸುತ್ತಿನ ಕಾದಾಟ.. ವಿಜಯೇಂದ್ರ ಪಟ್ಟ ಕಿತ್ತುಕೊಳ್ಳಲು ಕಾದು ಕೂತಿದೆ ಯತ್ನಾಳ್ ಪಡೆ..ಯತ್ನಾಳ್ ಆರ್ಭಟಕ್ಕೆ ಸಾಹುಕಾರನ ಅಬ್ಬರದ ಸಾಥ್.
ವಿಜಯೇಂದ್ರ ವಿರುದ್ಧ ಸಮರ ಸಾರಿದ ರಮೇಶ್ ಜಾರಕಿಹೊಳಿ.. ರಾಜ್ಯಾಧ್ಯಕ್ಷರ ಮೇಲೆ ಏಕವಚನದಲ್ಲಿಯೇ ವಾಗ್ದಾಳಿ.. ವಿಜಯೇಂದ್ರ ಬೆನ್ನ ಹಿಂದೆಯೂ ನಿಂತಿದೆ ಬಲಿಷ್ಠ ಪಡೆ. ಕಮಲ ಕೋಟೆಯಲ್ಲಿ ಶುರುವಾಗಿರೋದು ನೀವಾ..? ನಾವಾ..? ಅಂತರ್ಯುದ್ಧ.
ಕಾಂಗ್ರೆಸ್ ಪಾಳಯದೊಳಗಿದ್ದ ಅಂತರ್ಯುದ್ಧಕ್ಕೆ ಸಂಪೂರ್ಣ ವಿರಾಮ ಹಾಕಿದ್ದಾರೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ, ಮಲ್ಲಿಕಾರ್ಜುನ ಖರ್ಗೆ.. ಅವರು ಕೈಕಟ್ ಬಾಯ್ಮುಚ್ ಅಂತಿದ್ದ ಹಾಗೇ, ಇದ್ದಗೊಂದಲವೆಲ್ಲಾ ಮರೆಯಾಗಿದೆ. ಆದರೆ, ಕಮಲ ಪಾಳಯದಲ್ಲಿ ಹೊಸದಾದ ಟೆನ್ಶನ್ ಶುರುವಾಗಿದೆ.




