ವಿಜಯಪುರ : ಬಿಜೆಪಿಯಿಂದ ಆರು ವರ್ಷಗಳ ಕಾಲ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಒಬ್ಬ ಹುಚ್ಚು ನಾಯಿ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ವಾಗ್ದಾಳಿ ನಡೆಸಿದ್ದಾರೆ.
ಉಚ್ಚಾಟನೆಯನ್ನು ವಿರೋಧಿಸಿ ಯತ್ನಾಳ್ ಬೆನ್ನಿಗೆ ನಿಂತಿದ್ದ ಜಯಮೃತ್ಯುಂಜಯ ಸ್ವಾಮಿ ವಿರುದ್ಧ ಕೆಲದಿನಗಳ ಹಿಂದೆಯಷ್ಟೇ ಕಾಶಪ್ಪನವರ ನಾನು ಹಂದಿಗಳ ಬಗ್ಗೆ ಮಾತನಾಡಲ್ಲ ಎಂದಿದ್ದ ಯತ್ನಾಳ್ ಅವರಿಗೆ ಮತ್ತೊಮ್ಮೆ ಕಾಶಪ್ಪನವರ ಟಾಂಗ್ ನೀಡಿದ್ದು, ಯತ್ನಾಳ್ ಪದೇ-ಪದೇ ವಿವಾದಾತ್ಮಕ ಹೇಳಿಕೆ ನೀಡುವುದು ಸರಿಯಲ್ಲ. ಅವನೊಬ್ಬ ಹುಚ್ಚು ನಾಯಿ, ಅವನಿಗೆ ಯಾವ ದಯೆಯೂ ಇಲ್ಲ, ಧರ್ಮವೂ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ದಯವೇ ಧರ್ಮದ ಮೂಲವಯ್ಯ ಎಂದು ಬಸವಣ್ಣನವರ ವಚನವನ್ನು ಹೇಳುವ ಮೂಲಕ ಯತ್ನಾಳ್ ವಿರುದ್ಧ ಕುಟುಕಿದ್ದಾರೆ. ಯತ್ನಾಳ್ ಒಬ್ಬ ನರಪಿಳ್ಳೆ, ಹುಚ್ಚು ನಾಯಿ, ಗೊಡ್ಡು ಎಮ್ಮೆ ಎಂದು ತಿವಿದಿದ್ದಾರೆ.
ಮುಸ್ಲಿಮರು ಈ ದೇಶದಲ್ಲಿರುವವರೆಗೂ ದೇಶದಲ್ಲಿ ಶಾಂತಿ ನೆಲೆಸಲ್ಲ ಎಂದು ಮೊನ್ನೆಯಷ್ಟೇ ಯತ್ನಾಳ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದು ಗೊತ್ತೇ ಇದೆ.