Ad imageAd image

ನಮ್ಮ ದ್ವನಿಯ ಹಿಂದೆ ಯತ್ನಾಳ್ ಅವರೂ ಇದ್ದಾರೆ : ವಚನಾನಂದ ಶ್ರೀ 

Bharath Vaibhav
ನಮ್ಮ ದ್ವನಿಯ ಹಿಂದೆ ಯತ್ನಾಳ್ ಅವರೂ ಇದ್ದಾರೆ : ವಚನಾನಂದ ಶ್ರೀ 
WhatsApp Group Join Now
Telegram Group Join Now

ರಾಜಕೀಯವಾಗಿ ಪಂಚಮಸಾಲಿಗಳಿಗೆ ಅನ್ಯಾಯ ಆಗಿದೆ ಎಂಬುದಕ್ಕೆ ಹಲವು ನಿದರ್ಶನಗಳಿವೆ.ಯತ್ನಾಳ ಅವರು ನಮ್ಮ ಸಮುದಾಯದ ಮತ್ತು ಬಿಜೆಪಿಯ ಹಿರಿಯ ನಾಯಕರು,

ಅಟಲ್ ಬಿಹಾರಿ ವಾಜಪೇಯಿಯವರ ಜತೆ ಸಚಿವ ಸಂಪುಟದ ಸಚಿವರಾಗಿದ್ದವರು, ಇಪ್ಪತ್ತು ವರ್ಷಗಳ ಹಿಂದೆಯೇ ಕೇಂದ್ರ ನಾಯಕರಾಗಿದ್ದವರು, ಇಂದು ತಾಲೂಕು ಮಟ್ಟದ ನಾಯಕರಾಗಿರುವುದು ನಮಗೆ ಅತ್ಯಂತ ನೋವಿನ ಸಂಗತಿಯಾಗಿದೆ.

ಯಡಿಯೂರಪ್ಪ,ಅನಂತಕುಮಾರ ಅವರೊಂದಿಗೆ ಸೈಕಲ್ ಮೇಲೆ ರಾಜ್ಯ ಸುತ್ತಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದವರಲ್ಲಿ ಯತ್ನಾಳ್ ಅವರೂ ಇದ್ದಾರೆ. ಅವರ ಹಿರಿತನದ ಆಧಾರದ ಮೇಲೆ ಇಂದು ಕೇಂದ್ರದ ಪ್ರಭಾವಿ ಮಂತ್ರಿಗಳಾಗಬೇಕಾಗಿತ್ತು.

ಇವರೊಂದಿಗೆ ಪಕ್ಷ ಕಟ್ಟಿದವರು ಮುಖ್ಯಮಂತ್ರಿಯಾದರು, ಕೇಂದ್ರದಲ್ಲಿ ಹಲವು ಬಾರಿ ಮಂತ್ರಿಗಳಾದರು. ಯಡಿಯೂರಪ್ಪನವರ ತದನಂತರದಲ್ಲಿ ಮುಖ್ಯಮಂತ್ರಿಗಳಾಗುವ ಎಲ್ಲ ಅರ್ಹತೆಗಳಿದ್ದರೂ ಯತ್ನಾಳ ಅವರು ಪಂಚಮಸಾಲಿ ಸಮುದಾಯದವರೆಂದು ಮಲತಾಯಿ ಧೋರಣೆ ತೋರಲಾಯಿತು.

ಮೊನ್ನೆ ವಿರೋಧ ಪಕ್ಷದ ನಾಯಕರಾಗುವ ಹಾಗೂ ರಾಜ್ಯಾಧ್ಯಕ್ಷರಾಗುವ ಎಲ್ಲಾ ಅವಕಾಶವಿದ್ದರೂ ಈ ಕಾರಣದಿಂದಲೇ ತಪ್ಪಿಸಲಾಯಿತು.

ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ ಎನ್ನುವ ನಮ್ಮ ದ್ವನಿಯ ಹಿಂದೆ ಯತ್ನಾಳ್ ಅವರೂ ಇದ್ದಾರೆ. ಅದರ ಸಂಕೇತವೇ ನಮ್ಮ ಈ ಧ್ವನಿ.

ವಂದನೆಗಳೊಂದಿಗೆ,

ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ

ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ,ಹರಿಹರ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!