ಬೆಂಗಳೂರು : ಕಾಂಗ್ರೆಸ್ ಸರ್ಕಾರದ ದರ ಏರಿಕೆ ವಿರುದ್ಧ ಬಿಜೆಪಿ ನಾಯಕರು ಅಹೋರಾತ್ರಿ ಧರಣಿ ನಡೆಸಿದ್ದು ಇದರ ವಿರುದ್ಧ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ ಕಾರಿದ್ದಾರೆ.
ಯಡಿಯೂರಪ್ಪನವರು ತಮ್ಮ ಮಗನ ರಕ್ಷಣೆಗಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆಯೇ ಹೊರತು ಇದರ ಹಿಂದೆ ಯಾವುದೇ ರೀತಿಯ ಜನರ ಪರ ಕಾಳಜಿ ಇಲ್ಲ ಎಂದು ಯತ್ನಾಳ್ ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಯತ್ನಾಳ್, ಯಡಿಯೂರಪ್ಪನವರದು ಕೀಳು ಮಟ್ಟದ ರಾಜಕಾರಣ. ಅವರ ವಂಶಪಾರಂಪರ್ಯ ರಾಜಕಾರಣವನ್ನು ಮುಂದುವರೆಸಲು ಪ್ರತಿಭಟನೆ ನಡೆಸುತ್ತಿದ್ದಾರಷ್ಟೇ ಎಂದರು.
ತಾನು ಸಾಯೋ ಮುನ್ನ ವಿಜಯೇಂದ್ರನನ್ನು ಸಿಎಂ ಮಾಡುವ ಆಸೆಯಿಂದ ಬಿಎಸ್‌ವೈ ಇಷ್ಟೆಲ್ಲಾ ಹೋರಾಟ ಮಾಡುತ್ತಿದ್ದಾರೆ. ಅದಲ್ಲದೆ ವಿಶ್ವದಾದ್ಯಂತ ಆಸ್ತಿ ಮಾಡೋಕೆ ಈ ಹೋರಾಟ ಮಾಡ್ತಿದ್ದಾರೆ ಎಂದು ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದ್ರು.
ನನ್ನನ್ನು ಪಕ್ಷದಿಂದ ಹೊರಹಾಕಲು ಅಪ್ಪ-ಮಗನೇ ಕಾರಣ ಎಂದು ಕಿಡಿಕಾರಿದ ಯತ್ನಾಳ್, ನನ್ನನ್ನು ಪಕ್ಷದಿಂದ ಹೊರಹಾಕದಿದ್ರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಯಡಿಯೂರಪ್ಪ ಬ್ಲ್ಯಾಕ್ ಮೇಲ್ ಮಾಡಿದ್ರು. ಹೀಗಾಗಿಯೇ ನನ್ನನ್ನು ವರಿಷ್ಠರು ಪಕ್ಷದಿಂದ ಹೊರಹಾಕಿದ್ರು ಎಂದು ಆರೋಪಿಸಿದ್ರು
ಇನ್ನು ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿರುವ ವರೆಗೂ ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ಹಿಂತಿರುಗುವುದಿಲ್ಲ ಎಂದು ಯತ್ನಾಳ್ ಹೇಳಿದ್ರು