ನವದೆಹಲಿ : ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಮಾರ್ಚ್ 22 ರಂದು ಘೋಷಣೆ ಮಾಡಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದರು.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಿಮವಾಗಿ ಪ್ರಧಾನಿ ಮೋದಿ ಅವರ ಜೊತೆ ಸಮಾಲೋಚನೆ ಮಾಡಿ 22ನೇ ತಾರೀಕು ಯಾರು ಸ್ಪರ್ಧೆ ಮಾಡಬೇಕೆನ್ನುವುದು ಘೋಷಣೆ ಮಾಡಲಿದ್ದಾರೆ.
ಬಹಳ ಮುಖ್ಯವಾಗಿ ಬಿಜೆಪಿ ಜೆಡಿಎಸ್ ಹೊಂದಾಣಿಕೆ ಆಗುತ್ತಿರುವುದರಿಂದ ಈ ಬಾರಿ ನಾವು ಅಂದುಕೊಂಡಂತೆ 28ಕ್ಕೆ 28 ಲೋಕಸಭಾ ಕ್ಷೇತ್ರ ಬಿಜೆಪಿ ಜೆಡಿಎಸ್ ಗೆ ಗೆಲುವು ಸಾಧ್ಯವಾಗುತ್ತದೆ.
ದೇವೇಗೌಡರು ಸಹ ಪ್ರಧಾನಿ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ.ಅಮಿತ್ ಶಾ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಇದೆಲ್ಲರ ಪರಿಣಾಮ ನಮ್ಮ ನಿರೀಕ್ಷೆ ಮೀರಿ ಒಳ್ಳೆಯ ಫಲಿತಾಂಶ ಎಂಬ ವಿಶ್ವಾಸ ನನಗಿದೆ. ಎರಡು ಮೂರು ದಿವಸದಲ್ಲಿ 28 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಮೇಲೆ ನಾವೆಲ್ಲ ರಾಜ್ಯದಲ್ಲಿ ಪ್ರವಾಸ ಮಾಡುವುದಕ್ಕೆ ಹೊರಡುತ್ತೇವೆ.
ಜನ ಇಂದು ಮೋದಿ ಅವರ ಪರ ಬಿಜೆಪಿಯವರ ಪರ ಇರುವುದರಿಂದ ಇತ್ತೀಚಿನ ನಡೆದ ಎಲ್ಲಾ ಚುನಾವಣೆಗಳಿಗಿಂತ ಈ ಚುನಾವಣೆ ನಮ್ಮ ಗೆಲುವಿಗೆ ಬಹಳ ಅನುಕೂಲವಾಗುತ್ತದೆ ಎಂದು ನಾನು ಭಾವಿಸಿದ್ದೇನೆ ಎಂದು ತಿಳಿಸಿದರು.