ಮಾನ್ವಿ:ಕರ್ನಾಟಕದಲ್ಲಿ ಒಂದು ಕುಗ್ರಾಮ ಶಾಸಕರೇ ಜನಪ್ರತಿನಿಧಿಗಳೇ ಎಲ್ಲಿದ್ದೀರಿ ಜನರ ಗೋಳು ಕೇಳೋರ್ಯಾರು
ಮಾನ್ವಿ ತಾಲೂಕಿನ ಯರಮದೊಡ್ಡಿ ಗ್ರಾಮದಲ್ಲಿ ಜನಪ್ರತಿನಿಧಿಗಳಿಗೆ ಊರ ಜನರಿಂದ ಇಡಿ ಶಾಪ.
ಬಡಜನರ ಹಳ್ಳಿಗಳ ಏಳಿಗೆಗಾಗಿ ಸರ್ಕಾರವು ಅನೇಕ ಯೋಜನೆಗಳನ್ನು ಪ್ರತಿ ವರ್ಷ ಜಾರಿಗೆ ತರುತ್ತದೆ ಆದರೆ ಈ ಯೋಜನೆಯ ಮಾನ್ವಿ ತಾಲೂಕಿನ ಯರಮದೊಡ್ಡಿ ಗ್ರಾಮಕ್ಕೆ ಅನ್ವಯವಾಗುವುದಿಲ್ಲ.
ಪಂಚಾಯಿತಿಯಿಂದ ಅಭಿವೃದ್ಧಿ ಹೊಂದಬೇಕಿದ್ದ ಗ್ರಾಮವು ಅನೇಕ ಸಮಸ್ಯೆಗಳಿಂದ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತಿರುವ ಗ್ರಾಮಸ್ಥರು.
ಮಾನ್ವಿ ತಾಲೂಕಿನ ಯರಮಲದೊಡ್ಡಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ ರಸ್ತೆ ಚರಂಡಿ ನೀರು ವಿದ್ಯುತ್ ಇಲ್ಲಿ ಯಾವುದು ಕೇಳುವ ಮಾತೇ ಇಲ್ಲ.
ಮಹಿಳೆಯರು ವೃದ್ಧರು ಸರಿಯಾದ ರಸ್ತೆ ಇಲ್ಲದೆ ಊರಿಗೆ ಶೌಚಾಲಯ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದೆ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಈ ಬಗ್ಗೆ ಸಂಬಂಧಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾದರು ಸಹ ಯಾವುದೇ ಪ್ರಯೋಜನವಾಗಿಲ್ಲವೆಂದು ಊರಿನ ಗ್ರಾಮಸ್ಥರು ದೂರಿದರು.
ಊರಿನ ಗ್ರಾಮಸ್ಥರು ಎರಡು ದಿನ ಕಾಲಾವಕಾಶವನ್ನು ಸಂಬಂಧಪಟ್ಟ ಇಲಾಖೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಕೊಡುತ್ತೇವೆ ಸರಿಯಾದ ಸಮಯದಲ್ಲಿ ಕೆಲಸವನ್ನು ಮಾಡದಿದ್ದ ಪಕ್ಷದಲ್ಲಿ ಉಗ್ರ ಹೋರಾಟವನ್ನು ಕೈ ಗೊಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಮುಖರು ಗ್ರಾಮಸ್ಥರು ಭಾಗಿಯಾಗಿ BV 5 News ಮುಂದೆ ಕಷ್ಟವನ್ನು ಹೇಳಿದರು.
ವರದಿ: ಶಿವ ತೇಜ