ನವದೆಹಲಿ : 2024ಕ್ಕೆ ಗುಡ್ಬಾಯ್ ಹೇಳಿ 2025ನ್ನು ಭರ್ಜರಿಯಾಗಿ ಸ್ವಾಗತಿಸಲಾಗಿದೆ. ಇದರ ನಡುವೆ ವರ್ಷದ ಕೊನೆ ದಿನ ಮಾರಾಟವಾದ ಆಲ್ಕೋಹಾಲ್ ಎಷ್ಟು, ಪೊಲೀಸರು ದಾಖಲಿಸಿದ ಡ್ರಿಂಕ್ ಆಯಂಡ್ ಡ್ರೈವ್ ಕೇಸ್ಗಳು ಎಷ್ಟು ಎಂಬುದರ ಕುರಿತು ಅನೇಕ ಅಂಕಿ ಅಂಶಗಳು ಹೊರಬರುತ್ತಿವೆ.
ಇದರ ನಡುವೆ ಬ್ಲಿಂಕ್ಇಟ್ ಕಂಪನಿಯ CEO ಅಲ್ಬೀಂದರ್ ದಿಂಡ್ಸಾ ಬ್ಲಿಂಕ್ನಲ್ಲಿ ವರ್ಷದ ಕೊನೆ ದಿನ ತಮ್ಮ ಅಂಗಡಿಯಿಂದ ಮಾರಾಟವಾದ ವಸ್ತುಗಳ ಅಂಕಿ ಅಂಶವನ್ನು ಬಿಡುಗಡೆ ಮಾಡಿದ್ದು. ಇದರಲ್ಲಿ ದಾಖಲೆ ಪ್ರಮಾಣದಲ್ಲಿ ಕಾಂಡೋಮ್ ಮಾರಾಟವಾಗಿದೆ ಎಂದು ಮಾಹಿತಿ ದೊರೆತಿದೆ.
ಭಾರತದಲ್ಲಿ ವ್ಯಾಪಕವಾಗಿ ಬಳಸುವ ಇ-ಕಾರ್ಮಸ್ ಫ್ಲಾಟ್ಪಾರ್ಮ್ ಬ್ಲಿಂಕ್ಇಟ್ನಲ್ಲಿ ವರ್ಷದ ಕೊನೆಯ ದಿನವಾದ ನಿನ್ನೆ (ಡಿ.31) ಕಾಂಡೋಮ್, ನಿಂಬೆಹಣ್ಣು, ENO, ಐಸ್ಕ್ಯೂಬ್, ಮಿನರಲ್ ವಾಟರ್, ಚಿಪ್ಸ್, ತಿಂಡಿಗಳು ಯಾವ ಪ್ರಮಾಣದಲ್ಲಿ ಮಾರಾಟವಾಗಿದೆ ಎಂಬುದನ್ನು ಸಿಇಓ. ಅಲ್ಬೀಂದರ್ ದಿಂಡ್ಸಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಡಿಸೆಂಬರ್ 31 ರಂದು, ರಾತ್ರಿ 10 ಗಂಟೆ ವೇಳೆಗೆ ಸುಮಾರು 1,22,356 ಕಾಂಡೋಮ್ಗಳು ಮಾರಾಟವಾಗಿದೆ ಎಂದು ಬ್ಲಿಂಕ್ ಇಟ್ ಮಾಹಿತಿ ಹಂಚಿಕೊಂಡಿದ್ದು. ಯಾವ ಫ್ಲೇವರ್ ಕಾಂಡೋಮ್ಗಳು ಎಷ್ಟು ಪ್ರಮಾಣದಲ್ಲಿ ಮಾರಟವಾಗಿದೆ ಎಂಬುದನ್ನು ಹಂಚಿಕೊಂಡಿದೆ.
ಅದರ ಜೊತೆಗೆ ಸುಮಾರು 2,34,512 ಪ್ಯಾಕೆಟ್ ಆಲೂ ಭುಜಿಯಾ, 45,531 ಕ್ಯಾನ್ ಟಾನಿಕ್ ವಾಟರ್, 6,834 ಪ್ಯಾಕೆಟ್ ಐಸ್ ಕ್ಯೂಬ್‌ಗಳು, 1003 ಲಿಪ್‌ಸ್ಟಿಕ್‌ಗಳು ಮತ್ತು 762 ಲೈಟರ್‌ಗಳು ಮಾರಾಟವಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.