———————————————ಶಿಲಾರಕೋಟ್ ಶಾಲೆ ವಿದ್ಯಾರ್ಥಿಗಳಿಗೆ ಜನರ ಮೆಚ್ಚುಗೆ
ಸೇಡಂ: ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಖೋಖೋ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಇಡೀ ಹಳ್ಳಿಗೆ ಕೀರ್ತಿ ತಂದಿದ್ದಾರೆ.
ಗಡಿನಾಡು ಕೀರ್ತಿ ಹೆಚ್ಚಿಸಿದ ಗಡಿಗ್ರಾಮದ ವಿದ್ಯಾರ್ಥಿಗಳು : ಸತತವಾಗಿ ನಾಲ್ಕನೇ ಬಾರಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಮೂರು ಬಾರಿ ಸ್ವಲ್ಪ ಮಟ್ಟದಲ್ಲಿ ಹಿಂದೇಟು ಹಾಕಿದರು. ಆದರೆ ಈ ವರ್ಷ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಪ್ರತಿಭೆ ಸಾಧಕನ ಸ್ವತ್ತು ಎಂಬುದು ಸಾಬೀತುಪಡಿಸಿದ್ದಲ್ಲದೇ ಗಡಿನಾಡಿಗೆ ಅಪಾರ ಕೀರ್ತಿ ತಂದಿದ್ದಾರೆ.
ಆಟದ ಮೈದಾನ ಇಲ್ಲದಿದ್ದರೂ ಪ್ರತಿಭೆಗೆ ಕೊರತೆಯಿಲ್ಲ: ಸತತವಾಗಿ ಜಿಲ್ಲಾ ಮಟ್ಟದಲ್ಲಿ ಖೋಖೋ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರತಿವರ್ಷ ಊರಿಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳಿಗೆ ಆಟ ಪ್ರಾಕ್ಟಿಸ್ ಮಾಡಲು ಸರಿಯಾದ ಮೈದಾನ ಇಲ್ಲಾ. ಖಾಸಗಿ ಸ್ಥಳದಲ್ಲಿ ಮಕ್ಕಳಿಗೆ ಕೋಚಿಂಗ್ ನೀಡಲಾಗಿದೆ. ಖಾಸಗಿ ಸ್ಥಳವಾಗಿರುದರಿಂದ ಕೆಲವೊಂದು ಬಾರಿ ಅನೇಕ ಸಮಸ್ಯೆಗಳು ಎದುರಾಗುತ್ತಿದ್ದವು ಆದರೂ ಆಡುವ ಹಠದಿಂದ ಸಮಸ್ಯೆಗಳನ್ನು ಎದುರಿಸಿ ಪ್ರಾಕ್ಟಿಸ್ ಮಾಡುತ್ತಾರೆ. ಒಬ್ಬೊಬ್ಬರಿಗೂ ಒಂದು ರೀತಿಯ ಪ್ರತಿಭೆ ಇದೆ.
ಜಾಗ ಖಾಲಿ ಇದ್ದರೂ ಮೈದಾನದ ವ್ಯವಸ್ಥೆ ಇಲ್ಲ: ಶಾಲೆಯ ಹಿಂಬಾಗದಲ್ಲಿ ಸರಕಾರಿ ಸ್ಥಳ ಖಾಲಿ ಇದ್ದರೂ ಮೈದಾನದ ವ್ಯವಸ್ಥೆ ಇಲ್ಲ ಕಾರಣ ಕೆಲವು ಜನ ಖಾಸಗೀಕರಣವಾಗಿ ಉಪಯೋಗಿಸುತ್ತಾರೆ.
ಅವರನ್ನು ತೆರವುಗೊಳಿಸಿ ಆ ಜಾಗವನ್ನು ಶಾಲೆಗೆ ಒಪ್ಪಿಸಿದರೆ ಇಂತಹ ಪ್ರತಿಭೆಗಳಿಗೆ ಇನ್ನಷ್ಟೂ ಪ್ರೋತ್ಸಾಹವಲ್ಲಿ ನಮ್ಮ ಸಹಕಾರವಿರುತ್ತದೆ ಎಂದು ಗ್ರಾಮಸ್ಥರ ಅಭಿಪ್ರಾಯ.
ದೈಹಿಕ ಶಿಕ್ಷಕರಿಲ್ಲದಿದ್ದರೂ ತಾಲೂಕಮಟ್ಟದಲ್ಲಿ ಪ್ರತಿಸಲ ಇವರೇ ಫಸ್ಟ್.
ಈ ಶಾಲೆಯಲ್ಲಿ ಸುಮಾರು ವರ್ಷಗಳಿಂದ ದೈಹಿಕ ಶಿಕ್ಷರಿಲ್ಲ ಆದರೂ ಪ್ರತಿ ವರ್ಷ ತಾಲೂಕ ಮಟ್ಟದಲ್ಲಿ ಖೋಖೋ ಸ್ಪರ್ಧೆಯಲ್ಲಿ ಇವರೇ ಪ್ರಥಮ ಸ್ಥಾನ. ಈ ಊರಿನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಭೀಮರೆಡ್ಡಿ ಆಕುಧೋಟಾ ಅವರು ಕ್ರೀಡೆಗಳ ಮೇಲೆ ತನಗಿರುವ ಅಭಿಮಾನದಿಂದ ಈ ಶಾಲೆಯ ಮಕ್ಕಳಿಗೆ ತರಬೇತಿ ನೀಡಿ ಉನ್ನತ ಮಟ್ಟಕ್ಕೆ ಆಯ್ಕೆಯಾಗಳು ಕಾರಣವಾಗಿದ್ದಾರೆ.
ಪ್ರತಿಭೆಯಿದ್ದು ಶಿಕ್ಷಕರಿಲ್ಲದಿದ್ದರೂ ಇಷ್ಟೊಂದು ಸಾಧನೆ ಮಾಡಿದ್ದಾರೆ ಎಂದರೆ ಆಟದ ಮೇಲೆ ಇವಗಿರುವ ಪಟ್ಟು ಎಂತದ್ದು ಎಂದು ತಿಳಿದು ಬರುತ್ತಿದೆ.
ಈ ಕ್ಷಣಗಳು ನಮ್ಮ ಸಮುದಾಯದ ಬೆಳವಣಿಗೆಗೆ ಸಕಾರಾತ್ಮಕ ದಿಕ್ಕಿನಲ್ಲಿ ಕೊಡುಗೆ ನೀಡುತ್ತವೆ ಮತ್ತು ಅನೇಕರಿಗೆ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತವೆ. ಈ ಅದ್ಭುತ ಮಕ್ಕಳಿಗೆ ಮಾರ್ಗದರ್ಶನ ನೀಡುವಲ್ಲಿ ಭಾಗಿಯಾಗಿರುವ ಶಿಕ್ಷಕರು ಮತ್ತು ಎಲ್ಲರಿಗೂ ನಾನು ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಎಲ್ಲಾ ಮಕ್ಕಳ ಅವಿರತ ಪ್ರಯತ್ನಗಳು ಶ್ಲಾಘನೀಯ. ಮುಂದಿನ ದಿನಗಳಲ್ಲಿ ನಮ್ಮ ರಾಜ್ಯ ಮತ್ತು ರಾಷ್ಟ್ರೀಯ ಕನಸುಗಳನ್ನು ಮುಂದುವರಿಸಲಿ ಎಂದು ವೆಂಕಟರೆಡ್ಡಿ ಡಿ ಪಾಟೀಲ್ ಕಾಂಗ್ರೆಸ್ ಮುಖಂಡರು ವ್ಯಕ್ತಪಡಿಸಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




