Ad imageAd image

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ದಿನಾಚರಣೆ.

Bharath Vaibhav
WhatsApp Group Join Now
Telegram Group Join Now

ಯಳಂದೂರು:-ತಾಲ್ಲೂಕಿನ ಯರಿಯೂರು ಉನ್ನತಿಕರಿಸಿದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನವನ್ನು ವಿವಿಧ ಭಂಗಿಯ ಯೋಗ ಪ್ರದರ್ಶಿಸುವ ಮೂಲಕ ಆಚರಣೆ ಮಾಡಲಾಯಿತು.ವಿದ್ಯರ್ಥಿಗಳು ಹಾಗೂ ಶಿಕ್ಷಕರು ಸಮವಸ್ತ್ರ ಧರಿಸಿ ಶಿಸ್ತಿನಿಂದ ಯೋಗಮಾಡುವುದರ ಮೂಲಕ ಯೋಗ ದಿನಾಚರಣೆಯನ್ನು ನಡೆಸಿದರು.

ಈ ವೇಳೆ ದೈಹಿಕ ಶಿಕ್ಷಕರಾದ ಮಹದೇವ್ ರವರು ಮಾತನಾಡಿ ದೇಹ ಮತ್ತು ಮನಸ್ಸು ಎರಡನ್ನೂ ಸ್ವಸ್ಥವಾಗಿಡಲು ಯೋಗದಿಂದ ಸಾಧ್ಯವಿದೆ,ಯೋಗವೆಂದರೆ ಔಷಧ ರಹಿತ ಚಿಕಿತ್ಸಾ ಪದ್ಧತಿಯ ದೇಸಿ ಕ್ರಮ,ಮಿತ ಆಹಾರ ಸೇವನೆ, ಉಪವಾಸ ವ್ಯಾಯಾಮದಂತಹ ಚಿಕಿತ್ಸಾ ಕ್ರಮಗಳ ಮೂಲಕ ಮನುಷ್ಯನ ದೇಹವನ್ನು ನಿಯಂತ್ರಣ ತರಬಹುದಾಗಿದೆ. ಪ್ರತಿದಿನ ಯೋಗ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಬಹುದು,ಜೊತೆಗೆ ಸರಳ ಯೋಗಗಳು ನಮ್ಮ ಮನಸ್ಸನ್ನು ಉಲ್ಲಸವಾಗಿಡುತ್ತದೆ ಎಂದರು.

ಶಿಕ್ಷಕ ಸುರೇಶ್ ಮಾತನಾಡಿ ಇಂದಿನ ಒತ್ತಡದ ಜೀವನದಲ್ಲಿ ಮನುಷ್ಯನ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಭ್ಯಾಸ ಅಗತ್ಯವಾಗಿದೆ, ಯಾವುದೇ ವಯಸ್ಸಿನ ಮಿತಿಯಿಲ್ಲದೆ ಯೋಗವನ್ನು ಅಭ್ಯಾಸ ಮಾಡಿಕೊಳ್ಳಬೇಕು,ಜಗತ್ತಿಗೆ ಯೋಗವನ್ನು ಅನಾದಿ ಕಾಲದಿಂದಲೂ ಪರಿಚಯ ಮಾಡಿ ಕೊಟ್ಟಿರುವುದು ನಮ್ಮ ಭಾರತ ದೇಶದ ಋಷಿ ಮುನಿಗಳು, ಯೋಗದಿಂದ ಸದೃಢ ದೇಹ ಮತ್ತು ಸದೃಢ ಮನಸ್ಸು ನಿರ್ಮಾಣವಾಗುತ್ತದೆ. ಒಳ್ಳೆಯ ಜೀವನಶೈಲಿ, ಸಾತ್ವಿಕ ಆಹಾರ ಸೇವನೆ ಹಾಗೂ ಉತ್ತಮ ಚಿಂತನೆ ಮಾಡುತ್ತಾ ಕಾಯಕ ಯೋಗದ ಮೂಲಕ ಸಾರ್ಥಕವಾಗಿ ಬದುಕೋಣ ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಶಿಕ್ಷಕರಾದ ಬಸವಣ್ಣ, ಉಮಾಯಸ್ಮ, ನಿರ್ಮಲ ರಾಣಿ, ಮಂಜುಳಾ, ಮಮತಾ ಹಾಗೂ ಆಶಾ ಕಾರ್ಯಕರ್ತರು ವಿದ್ಯಾರ್ಥಿಗಳು ಹಾಜರಿದ್ದರು.

ವರದಿ :ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
Share This Article
error: Content is protected !!