ಬೀದರ : ಒತ್ತಡದ ಜೀವನದಲ್ಲಿ ಮನಷ್ಯನು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗವು ಅತ್ಯಂತ ಅವಶ್ಯಕವಾಗಿದ್ದು ಈ ನಿಟ್ಟಿಬಲ್ಲಿ ಯೋಗ ಪ್ರತಿಯೊಬ್ಬರ ಜೀವನದ ಭಾಗವಾಗಬೇಕಿದೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾದ್ಯಕ್ಷ ಸೋಮನಾಥ ಪಾಟೀಲ ಹೇಳಿದರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಭಾರತೀಯ ಜನತಾ ಪಕ್ಷ ಬೀದರ ನಗರ ಮಂಡಲ ವತಿಯಿಂದ ನಗರದ ವಿಜ್ಞಾನ ವರ್ಧಿನಿ ವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡ ವಿಶ್ವ ಯೋಗ ದಿನಾಚಾರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವೇದ ಉಪನೀಷತ್ತಿನಲ್ಲು ಯೋಗದ ಉಲ್ಲೇಖವಿದೆ ಮತ್ತು ಶತಮಾನಗಳಿಂದ ನಮ್ಮ ಸಾಧು ಸಂತರು ಮತ್ತು ಆಧ್ಯಾತ್ಮಿಕ ಗುರುಗಳು ಯೋಗಾಭ್ಯಾಸ ಮಾಡುತ್ತಿದ್ದಾರೆ.
ಯೋಗಗುರು ಬಾಬಾ ರಾಮದೇವ, ಶ್ರೀ ಶ್ರೀ ರವಿಶಂಕರ ಗೂರುಜಿ ಸೇರಿದಂತೆ ಅನೇಕ ಸಂತರು ಯೋಗವನ್ನು ಜಗತ್ತಿಗೆ ಪರಿಚಯಿಸಿದ್ದು, ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಯೋಗಕ್ಕೆ ವಿಶ್ವ ಮಾನ್ಯತೆ ದೊರೆತಿದ್ದು ಜಗತ್ತಿನಾದ್ಯಂತ ಯೋಗ ದಿನವನ್ನು ಆಚರಿಸುತ್ತಿರುವುದು ಭಾರತೀಯರೆಲ್ಲರಿಗೆ ಹೆಮ್ಮೆಯ ವಿಷಯ ಎಂದು ಹೇಳಿದರು.

ಐ.ಎನ್.ಓ ಜಿಲ್ಲಾದ್ಯಕ್ಷ ಗೋರಖನಾಥ ಕುಂಬಾರ ಹಾಗೂ ಉಪಾದ್ಯಕ್ಷ ನಿಲಮ್ಮಾ ರೂಗನ್ ಯೋಗಾಭ್ಯಾಸ ಮಾಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಭಗವಂತ ಖೂಬಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪಾ ಔರಾದೆ, ನಗರ ಅಧ್ಯಕ್ಷ ಶಶಿಧರ ಹೋಸಳ್ಳಿ, ಯೋಗ ದಿನಾಚರಣೆ ಅಭಿಯಾನದ ಜಿಲ್ಲಾ ಸಂಯೋಜಕ ಗುರುನಾಥ ರಾಜಗೀರಾ, ಪ್ರಮುಖರಾದ ಬಾಬು ವಾಲಿ, ಜಯಕುಮಾರ ಕಾಂಗೆ, ರಾಜಶೇಖರ ನಾಗಮೂರ್ತಿ, ಗಣೇಶ ಭೋಸ್ಲೆ, ಸುನೀಲ ಗೌಳಿ ಸೇರಿದಂತೆ ಇತರರಿದ್ದರು.

ವರದಿ:ಸಂತೋಷ ಬಿಜಿ ಪಾಟೀಲ




