———————————ವಿಶ್ವಯೋಗ ದಿನಾಚರಣೆಯ ಪ್ರಯುಕ್ತ ಹಸಿರು ಯೋಗ ಹಾಗೂ ವೃಕ್ಷಾರೋಪಣ |
——————————————-ಬೆಳಿಗ್ಗೆ 6 ರಿಂದ 8 ವರೆಗೆ ಕಾರ್ಯಕ್ರಮ : ಗುರುನಾಥ ರಾಜಗೀರಾ ಮಾಹಿತಿ
ಬೀದರ : ವಿಶ್ವ ಯೋಗ ದಿನಾಚರಣೆಯ ಪ್ರಚಾರ ಹಾಗೂ ಪ್ರಸಾರದ ನಿಮಿತ್ತ ದೇಶಾದ್ಯಂತ ಆಯುಶ್ ಇಲಾಖೆ ವತಿಯಿಂದ ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಅದರಲ್ಲಿ ಹಸಿರು ಯೋಗ ಹಾಗೂ ವೃಕ್ಷಾರೋಪಣ ಕಾರ್ಯಕ್ರಮವು ಪ್ರಮುಖವಾದದ್ದು ಎಂದು ಮಾತೃಭೂಮಿ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯದರ್ಶಿ ಗುರುನಾಥ ರಾಜಗೀರಾ ತಿಳಿಸಿದ್ದಾರೆ.
ಭಾರತ ಸರ್ಕಾರದ ಆಯುಶ್ ಇಲಾಖೆಯ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಯೋಗ ಆ್ಯಂಡ್ ನ್ಯಾಚುರೋಪತಿ ಸಹಯೋಗದೊಂದಿಗೆ ಮಾತೃಭೂಮಿ ಸೇವಾ ಪ್ರತಿಷ್ಠಾನವು ಗುರುವಾರ ಬೆಳಿಗ್ಗೆ 6 ಗಂಟೆಗೆ ಬೀದರ ನಗರದ ಪಾಪನಾಶ ದೇವಸ್ಥಾನದ ಆವರಣದಲ್ಲಿ ಯೋಗ ಹಾಗೂ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ವೃಕ್ಷಾರೋಪಣ ಕಾರ್ಯಕ್ರಮ ಆಯೊಜಿಸುತಿದ್ದು
ದಿವ್ಯಸಾನಿಧ್ಯವನ್ನ ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮಿಗಳು ವಹಿಸಲಿದ್ದು ಐ.ಎನ್.ಓ ಸಂಸ್ಥೆಯ ಜಿಲ್ಲಾದ್ಯಕ್ಷ ಗೋರಖನಾಥ ಕುಂಬಾರ ಯೋಗವನ್ನ ಹೇಳಿಕೊಡಲಿದ್ದಾರೆ, ಕಲಬುರಗಿಯ ನ್ಯಾಚುರೋಪತಿ ವೈದ್ಯ ಡಾ.ಋಷಿಕೇಶ ಅವರು ಯೋಗ ಹಾಗೂ ಪ್ರಾಕೃತಿಕ ಚಿಕಿತ್ಸಾ ಪದ್ದತಿ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ರೇವಣಸಿದ್ದಪ್ಪಾ ಜಲಾದೆ, ಪೀರಪ್ಪಾ ಔರಾದೆ, ಚಂದ್ರಕಾಂತ ಶೆಟಕಾರ, ಡಾ.ರೂಪೇಶ ಎಕಲಾರಕರ್, ಡಾ.ಚಂದ್ರಕಾಂತ ಹಳ್ಳಿ, ಡಾ.ಮಾಣಿಕ ತಾಂದಳೆ, ರಾಜಕುಮಾರ ಮಾಳಗೆ, ಕಿರಣ ಮೂರ್ತಿ, ಯೋಗೆಂದ್ರ ಯದಲಾಪುರೆ ಅವರು ಭಾಗವಹಿಸಲಿದ್ದು ಸಾರ್ವಜನಿಕರು ಹಾಗೂ ಯೋಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಗುರುನಾಥ ರಾಜಗೀರಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ವರದಿ: ಸಂತೋಷ ಬಿಜಿ ಪಾಟೀಲ




