ಕಾಗವಾಡ : ಬೇಸಿಗೆಯ ರಣ ಬಿಸಿಲಿನ ಮಧ್ಯೆ ಕೆಂಪು ಕೆಂಪಾದ ಐಸ್ ಕ್ಯಾಂಡಿ ಕಂಡ್ರೆ ಯಾರಿಗ್ತಾನೆ ತಿನ್ಬೇಕು ಅನಿಸಲ್ಲಾ ಕಣ್ರಿ ಹಾಗಿದ್ರೆ ನೀವು ಬಾಯಿ ಚಪ್ಪರಿಸಿ ತಿನ್ನುವ ಕ್ಯಾಂಡಿ ಹೇಗೆ ತಯಾರಾಗುತ್ತೆ ಗೊತ್ತಾ..? ನೀವು ಐಸ್ ಕ್ರೀಮ್ ಪ್ರಿಯರಾಗಿದ್ದಾರೆ ಖಂಡಿತವಾಗಿ ಈ ಸ್ಟೋರಿ ತಪ್ಪದೆ ನೋಡಿ..
ಈತನ ಹೆಸರು ಅಜಿತ ಅಂತಾ ಈತ ಮಾಡ್ತಿರೋ ಘನಂಧಾರಿ ಕೆಲಸ ನೋಡಿ,, ದೃಶ್ಯದಲ್ಲಿ ನೋಡ್ತಾ ಇದ್ದಿರಲ್ಲ ಇದು ಅಥಣಿ ತಾಲೂಕಿನ ಕಿರಣಗಿ ಅನ್ನೋ ಗ್ರಾಮ ಈ ಗ್ರಾಮದಲ್ಲಿ ಅನಧಿಕೃತವಾಗಿ ನಡೆಸಲಾಗ್ತಿರೋ ಐಸ್ ಕ್ರೀಮ್ ಫ್ಯಾಕ್ಟರಿ,ಇಲ್ಲಿ ಮಕ್ಕಳಿಗೆ ಮಾರಕವಾದ ಐಸ್ ಕ್ಯಾಂಡಿಗಳನ್ನ ತಯಾರಿಸಲಾಗುತ್ತದೆ. ಹೀಗೆ ಗಲೀಜ್ ಆಗಿರೋ ಕೇಮಿಕಲ್ ಮಿಶ್ರಿತ ಬಣ್ಣ ಹಾಗೂ ಚಾಕೋಲೇಟ್ ಫ್ಲೇವರ್ ಗಳನ್ನ ಬಳಸಲಾಗ್ತಿದೆ. ಪಶುಗಳು ತಿನ್ನಲು ಯೋಗ್ಯವಲ್ಲದ ಐಸ್ ಕ್ರೀಮ್ ಗಳನ್ನ ಮಕ್ಕಳಿಗೆ ಮಾರಾಟ ಮಾಡಲಾಗುತ್ತಿದೆ.
ಹೀಗೆ ತಯಾರಾಗಿರೋ ಕೆಂಪು ಕೆಂಪಾದ ಐಸ್ ಕ್ಯಾಂಡಿಗಳು ಕೊಳಚೆ ನೀರಿನಲ್ಲಿ ತಯಾರಾಗುತ್ತೆ ಅಂದ್ರೆ ನಿಜಕ್ಕೂ ದುರಂತ, ಇಷ್ಟೆಲ್ಲದೆ ತಾಲೂಕಿನ ಹಲವು ಕಡೆಗಳಲ್ಲಿ ಲೈಸನ್ಸ್ ಇಲ್ಲದೆ ಐಸ್ ಕ್ರೀಮ್ ತಯಾರಾಗುವ ಕಾರ್ಖಾನೆಗಳು ಇದ್ದರೂ ಸಹಿತ ಆಹಾರ ಸಂರಕ್ಷಣಾ ಅಧಿಕಾರಿಗಳು ಜಾಣ ಕುರುಡರಂತಿರುವುದು ಬೇಸರದ ಸಂಗತಿ,
ವರದಿ: ಮುರಗೇಶ ಗಸ್ತಿ