Ad imageAd image

ಸುಧಾರಾಣಿ 51 ರಲ್ಲೂ ಯಂಗ್ ಆ್ಯಂಡ್ ಬ್ಯೂಟಿಫುಲ್

Bharath Vaibhav
ಸುಧಾರಾಣಿ 51 ರಲ್ಲೂ ಯಂಗ್ ಆ್ಯಂಡ್ ಬ್ಯೂಟಿಫುಲ್
WhatsApp Group Join Now
Telegram Group Join Now

ಟಿ ಸುಧಾರಾಣಿ  ಅವರು ಎಲ್ಲರ ಫೇವರಿಟ್ ನಟಿ. ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಆ ಬಳಿಕ 1986ರಲ್ಲಿ ನಾಯಕಿ ಆಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಗೊತ್ತೇ ಇದೆ. ಆ ಬಳಿಕ ಸುಧಾರಾಣಿ ಸಾಲು ಸಾಲು ಚಿತ್ರಗಳನ್ನು ಮಾಡಿದರು. ಅವರು ಮಾಡದೇ ಇರುವ ಪಾತ್ರಗಳಿಲ್ಲ. ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. ಈಗ ಅವರು ‘ಮಜಾ ಟಾಕೀಸ್​’ಗೆ ಆಗಮಿಸಿದ್ದಾರೆ. ಅವರ ಯೌವನದ ಬಗ್ಗೆ ಇಲ್ಲಿ ಮಾತನಾಡಲಾಗಿದೆ ಅನ್ನೋದು ವಿಶೇಷ.

ಸುಧಾರಾಣಿ ಅವರು ಜನಿಸಿದ್ದು 1973ರಲ್ಲಿ. ಅವರಿಗೆ ಈಗ 51 ವರ್ಷ. ಅವರು ಈಗಲೂ ಯಂಗ್ ಆ್ಯಂಡ್ ಬ್ಯೂಟಿಫುಲ್ ಆಗಿ ಕಾಣಿಸುತ್ತಾರೆ. ಅವರು ನಿತ್ಯ ವ್ಯಾಯಾಮ, ಯೋಗ ಮಾಡುತ್ತಾರೆ. ಇದು ಅವರ ಸೌಂದರ್ಯದ ಹಿಂದಿನ ಗುಟ್ಟು. ಅವರು ಶಿವರಾಜ್​ಕುಮಾರ್ ಸೇರಿದಂತೆ ಕನ್ನಡದ ಅನೇಕ ಹೀರೋಗಳ ಜೊತೆ ನಟಿಸಿದ್ದಾರೆ. ‘ಫೈರ್ ಫ್ಲೈ’ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಈ ತಂಡ ಸಿನಿಮಾ ಪ್ರಚಾರಕ್ಕಾಗಿ ‘ಮಜಾ ಟಾಕೀಸ್’ ವೇದಿಕೆಗೆ ಬಂದಿದೆ.

ಮಜಾ ಟಾಕೀಸ್ ಸದಸ್ಯರು ಸುಧಾರಾಣಿ ಇನ್ನೂ ಯಂಗ್ ಆಗಿ ಕಾಣೋ ಬಗ್ಗೆ ಮಾತನಾಡಿದ್ದಾರೆ. ‘ಓರ್ವ ಮನುಷ್ಯ ಎಷ್ಟೇ ವರ್ಷ ಆದರೂ ಹೀಗೆ ಇರೋಕಾಗುತ್ತಾ? ನನ್ನ ಗಂಡ ರೊಮ್ಯಾಂಟಿಕ್ ಇರಲಿಲ್ಲ. ಆದರೆ, ಮನೆ ದೇವ್ರು ರಿಲೀಸ್ ಆಗಿ 100 ದಿನ ಕಳೆಯೋದರೊಳಗೆ ನನಗೆ ಮೂರು ತಿಂಗಳು’ ಎಂದು ಹಾಸ್ಯ ಚಟಾಕಿ ಹಾರಿಸಲಾಗಿದೆ.

ಸುಧಾರಾಣಿ ಅವರು ಈಗಲೂ ನಟನಾ ಲೋಕದ ಜೊತೆ ನಂಟು ಹೊಂದಿದ್ದಾರೆ. ಅವರು ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಾ ಇದ್ದಾರೆ. ಅವರು ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಟಿಆರ್​ಪಿಯಲ್ಲಿ ಗಮನ ಸೆಳೆಯುತ್ತಿದೆ. ಇನ್ನು, ಸುಧಾರಾಣಿ ಅವರು ಈಗಿನ ಜನರೇಶನ್ ರೀತಿ ಸೋಶಿಯಲ್ ಮೀಡಿಯಾ ಬಳಕೆ ಮಾಡುತ್ತಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ರೀಲ್ಸ್​ಗಳನ್ನು ಮಾಡಿ ಹಂಚಿಕೊಳ್ಳುತ್ತಾರೆ. ಅವರ ಮಗಳ ಜೊತೆಯೂ ರೀಲ್ಸ್ ಮಾಡುತ್ತಾರೆ.

WhatsApp Group Join Now
Telegram Group Join Now
Share This Article
error: Content is protected !!