ತಿರುಪತಿ: ಭಾರತದ ಯುವ ಚೆಸ್ ಚಾಂಪಿಯನ್ ಗುಕೇಶ್ ಡಿ ಬುಧವಾರ ದಕ್ಷಿಣ ಭಾರತದ ಪ್ರಸಿದ್ದ ದೇವಸ್ಥಾನ ತಿರುಪತಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ತಮ್ಮ ಕೇಶವನ್ನು ಅರ್ಪಿಸಿದರು.
ಗುಕೇಶ್ ಡಿ ಚೆಸ್ ಚಾಂಪಿಯನ್ ಆದ ನಂತರ ತಮ್ಮನ್ನು ತಾವು ಸಾಕಷ್ಟು ಚಟುವಟಿಕೆಯಲ್ಲಿ ಇರಿಸಿಕೊಂಡಿದ್ದು, ಆಟದ ಹೊರಗಿನ ಚಟುವಟಿಕೆಗಳಲ್ಲೂ ತೊಡಗಿಕೊಳ್ಳುವದರ ಮೂಲಕ ಚೆಸ್ ನ ಎಲ್ಲ ವಿಭಾಗಗಳಲ್ಲೂ ಪಾರಮ್ಯ ಮೆರೆಯಲು ಸದಾ ಚಟುವಟಿಗಳಲ್ಲಿ ತೊಡಗಿಕೊಂಡಿದ್ದಾರೆ. ತನ್ನ ಮುಂದೆ ಸಾಕಷ್ಟು ಮಹತ್ವದ ಪಂದ್ಯಾವಳಿಗಳಿದ್ದು, ಅವುಗಳತ್ತ ಗಮನ ಹರಿಸಿರುವುದಾಗಿ ಗುಕೇಶ್ ತಿಳಿಸಿದರು.




