ಗೋಕಾಕ : ಯುವ ಕಾಂಗ್ರೆಸ್ ಘಟಕ ಗೋಕಾಕ ವತಿಯಿಂದ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರೋಧಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಗ್ಯಾಸ್ ಇಟ್ಟು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಡಾ. ಮಹಾಂತೇಶ ಕಡಾಡಿಯವರು ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಜೀವನ ನಡೆಸಲು ಅನುಕೂಲ ಮಾಡುತ್ತಿದ್ದರೆ, ಕೇಂದ್ರ ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡಿ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದರು..
ನಂತರ ತಹಶಿಲ್ದಾರ ಕಚೇರಿ ವರೆಗೆ ಪಾದಯತ್ತೆ ಮೂಲಕ ತೆರಳಿ ತಹಸಿಲ್ದಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪುಟ್ಟು ಖಾನಾಪೂರೆ, ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಜಾಕೀರ್ ನದಾಫ್, ಯುವ ಕಾಂಗ್ರೆಸ್ ಘಟಕದ ತಾಲೂಕಾಧ್ಯಕ್ಷ ಪ್ರವೀಣ ತುಕ್ಕಾನಟ್ಟಿ, ಉಪಾಧ್ಯಕ್ಷ ಅಫ್ತಾಬ್ ಕಮತನೂರ, ಗ್ರಾಮೀಣ ಘಟಕದ ಅಧ್ಯಕ್ಷ ಶಂಕರ ಕಂಬಾರ, ನಗರ ಘಟಕದ ಅಧ್ಯಕ್ಷ ಯಾಸೀನ್ ಕಾಲೆಬಾಯ್, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಸಾದಿಕ್ ಲಾಡ್ ಖಾನ್ ಸೇರಿದಂತೆ ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.