ಹುಕ್ಕೇರಿ :ಡಾ.ಬಿ ಆರ್ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ -ಮಾಡಿ ಕೋರ್ಟ್ ಸರ್ಕಲದಿಂದ ದಲಿತ ಸಮುದಾಯದ ಶಿಕ್ಷಕಿಗೆ ಅರೆ ಬೆತ್ತಲೆ ಮಾಡಿ ಹೊಡೆದಿರುವ ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು ಘೋಷಣೆ ಕೂಗುತ್ತಾ ಮಿನಿ ವಿಧಾನಸೌಧ ಕಡೆಗೆ ಹೊರಟು, ಸಂಕೇಶ್ವರ ಪೊಲೀಸ್ ಠಾಣೆ ಪೊಲೀಸರಿಗೆ ಧಿಕ್ಕಾರ ಹಾಕಿದರು , ಹಾಗೂ ಮಾರಣಾಂತಿಕ ಹಲ್ಲೆ ಮಾಡಿದ ಕೆಲ ಮೇಲ್ವರ್ಗದ ಜಾತಿವಾದಿಗಳಿಗೆ ಮತ್ತು ಹುಕ್ಕೇರಿ ತಹಶೀಲ್ದಾರ್ ಆಫೀಸ್ ಎದುರಿಗೆ ಕೆಲ ಕಾಲ ಘೋಷಣೆ ಕೂಗುತ್ತಾ ಇದ್ದಾಗ ಗ್ರೇಟ್ 2 ತಹಶೀಲ್ದರಾದ ಪ್ರಕಾಶ್ ಕಲ್ಲೋಳಿ ಆಗಮಿಸಿದಾಗ, ನಿರಾಕರಿಸಿ ಮುಖ್ಯ ತಹಶೀಲ್ದಾರ್ ಬರಬೇಕೆಂದು ತಹಶೀಲ್ದಾರ್ ಗೆ ದಿಕ್ಕಾರನ್ನು ಕೂಗಿದರು.
ತದನಂತರ ಸ್ಥಳಕ್ಕೆ ಆಗಮಿಸಿದ ತಹಸಿಲ್ದಾರ್ ಶ್ರೀಮತಿ ಮಂಜುಳಾ ನಾಯಕ್, ನೀವು ಸಂಕೇಶ್ವರ ಪೊಲೀಸ್ ಠಾಣೆಗೆ ಅಟ್ರಾಸಿಟಿ ಪ್ರಕರಣ ದೂರದ ಅನ್ವಯ ಸಂಬಂಧಪಟ್ಟ ಅಧಿಕಾರಿಗೆ ದೂರವಾಣಿ ಮುಖಾಂತರ ಸ್ಥಳದಲ್ಲಿ ಮಾತನಾಡಬೇಕು. ಏಕೆಂದರೆ ಗರ್ಭಿಣಿ ಶಿಕ್ಷಕಿಯಾದ ಲಲಿತಾ ಐವಾಳೆ ಸಂಜು ಐವಾಳೆ ರಾಜು ಐವಾಳೆ, ನಿರ್ಮಲಾ ಐವಾಳೆ ನಾಲ್ವರ ಮೇಲೆ ರಾಮಗೌಡ ಪಾಟೀಲ್ ಎಸ್ ಡಿ.ಎಂ.ಸಿ ಅಧ್ಯಕ್ಷ ಹಾಗೂ ಅವನು ಒಂಬತ್ತು ಜನ ಸಹಚರಿಂದ ದಿನಾಂಕ್ 20/01/2025 ರಂದು 11:00ಗೆ ಶಾಲೆಗೆ ಬಂದು ಕೀಳ ಜಾತಿಯೊಳೆಂದು ಜಾತಿ ನಿಂದನೆ ಮಾಡಿ. ಶಾಲೆಯಿಂದ ಹೊರ ದಪ್ಪಿದ್ದಾರೆ ತದನಂತರ ಮನೆಗೆ ಹೋಗಿ ಲಲಿತಾ ಐವಾಳೆ ಗರ್ಭಿಣಿ ಅಂತ ಗೊತ್ತಿದ್ದರೂ ಅವಳ ಹೊಟ್ಟೆಯ ಮೇಲೆ ಒದ್ದು ಹೂಲೇರ್ ಮಾದಿಗೆ ಜಾತಿವಳು ನಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದು ಬೇಡವೆಂದು ಜಾತಿ ನಿಂದನೆ ಮಾಡಿ. ಅವರ ಮನೆಗೆ ಹೋಗಿ ಈ ವಿಚಾರವಾಗಿ ತಂಟೆ ತಕರಾರು ಮಾಡಿ ನಾಲ್ವರಿಗು ಹೊಡಿ ಬಡಿ ಮಾಡಿ ಅವಾಚ್ಯ ಶಬ್ದಗಳಿಂದ ಬೇದು -ಜಾತಿ ನಿಂದನೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಈ ವಿಚಾರವಾಗಿ ಸಂಕೇಶ್ವರ ಪೋಲಿಸ್ ಠಾಣೆಯಲ್ಲಿ 23/01/2025 ರಂದು ರಾತ್ರಿ 11:00 ರಾಮಗೌಡ ಪಾಟೀಲ್ ಮತ್ತು ಅವನ 9 -ಜನರ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ ಸಂಕೇಶ್ವರ್ ಪೊಲೀಸ್ ಇಲಾಖೆಯಿಂದ ಯಾವುದೇ ಆರೋಪಿಯನ್ನು ಇದುವರೆಗೆ ಬಂಧಿಸಿಲ್ಲ. ಹಾಗಾದ್ರೆ ಅಟ್ರಾಸಿಟಿ ಕಾಯಿದೆ ಮರ್ಯಾದೆ ಇಲ್ಲಾ, ಮರ್ಯಾದೆ ಇದ್ದರೆ ತಕ್ಷಣ 48 ಘಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಂತೆ ಈ ಕೂಡಲೇ ಸಂಕೇಶ್ವರ -ಪೊಲೀಸ್ ಇಲಾಖೆಗೆ ತಿಳಿ ಒತ್ತಾಯಿಸಿದರು. ತಕ್ಷಣ ಆರೋಪಿಗಳನ್ನು ಬಂಧಿಸಬೇಕು.
ಇಲ್ಲವಾದಲ್ಲಿ ಎರಡೇ ದಿನಗಳಲ್ಲಿ ನಾವು ಸಂಕೇಶ್ವರ ಪೊಲೀಸ್ ಠಾಣೆ ಮುತ್ತಿಗೆ ಹಾಕಬೇಕಾಗುತ್ತದೆ ಮಾದ್ಯಮ ಮುಂದೆ ಸಂಕೇಶ್ವರ ಪೋಲಿಸ್ ಠಾಣೆ ಅಧಿಕಾರಿಗಳ ವಿರುದ್ಧ ತ್ರೀವವಾಗಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು ತದನಂತರ ಮಾನ್ಯ ಹುಕ್ಕೇರಿ ತಹಶೀಲ್ದಾರ್ ಅವರಿಗೆ ಶಿಕ್ಷಕಿಗೆ ನ್ಯಾಯ ದೊರಕಿಸಿಕೊಡಿ ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆಂದು ಯುವ ಕರ್ನಾಟಕ ಭೀಮ್ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀಯುತ ಪ್ರವೀಣ್ ಆರ್ ಮಾದರ್ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಮಲಪ್ಪ ಅಕ್ಕಮಡಿ, ಶ್ರೀ ಉದಯ ಬಸೋಜಿ, ಹಾಗೂ ಬೆಳಗಾವಿ ಜಿಲ್ಲಾ ಸಂಘಟನಾ ಸಂಚಾಲಕ ಆಕಾಶ ಕಾಂಬಳೆ, ಬೆಳಗಾವಿ ಜಿಲ್ಲಾ ನಗರ ಅಧ್ಯಕ್ಷ ಸಂಪತ್ ಬಲೋಗಿ ಇನ್ನು ಮುಂತಾದವರು ಉಪಸ್ಥಿತರಿದ್ದರು
ವರದಿ :ಅಜಯ ಕಾಂಬಳೆ