ಬೆಳಗಾವಿ : ಆನ್‌ಲೈನ್ ಬೆಟಿಂಗ್ ಪಿಡುಗಿಗೆ ಯುವಕನೊಬ್ಬ ಬಲಿಯಾಗಿರುವ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ. ಅನಿಲ್ ರಾಮು ಜಾಧವ್ (34) ಮೃತ ದುರ್ದೈವಿ.
ಹಲವು ದಿನಗಳಿಂದ ಆನ್‌ಲೈನ್ ಬೆಟಿಂಗ್ ಚಟಕ್ಕೆ ಬಿದ್ದಿದ್ದ ಅನಿಲ್ ರಾಮು ಜಾಧವ್ ಇದಕ್ಕಾಗಿ ಹಣ ಸುರಿದು ಸಾಕಷ್ಟು ಸಾಲವನ್ನೂ ಮಾಡಿಕೊಂಡಿದ್ದ.ಸಾಲದ ಸುಳಿಯಲ್ಲಿ ಸಿಲುಕಿದ್ದ ಅನಿಲ್ ಗೆ ಸಾಲಗಾರರ ಕಿರುಕುಳ ಹೆಚ್ಚಾಗಿತ್ತು. ಸಾಲ ತೀರಿಸುವ ದಾರಿ ಕಾಣದೇ ಅನಿಲ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.