ಹೈದ್ರಾಬಾದ್ : ಇತ್ತೀಚಿಗೆ ಹಾರ್ಟ್ ಅಟ್ಯಾಕ್ ಅನ್ನೋ ಹೆಮ್ಮಾರಿ ವಯಸ್ಸಿನ ಬೇಧವಿಲ್ಲದೆ ಎಲ್ರನ್ನ ಬಲಿಪಡೆಯುತ್ತಿದೆ. ಹೈದ್ರಾಬಾದ್ ನಲ್ಲಿ ಬ್ಯಾಡ್ಮಿಂಟನ್ ಆಡುವ ವೇಳೆ ಆಟಗಾರನಿಗೆ ಹೃದಯಾಘಾತ ಆಗಿದೆ.
ಆಟ ಆಡುತ್ತಿರುವಾಗಲೇ ವ್ಯಕ್ತಿಯೊಬ್ಬ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.ಹೈದರಾಬಾದ್‌ನ ನಾಗೋಲ್ ಕ್ರೀಡಾಂಗಣದಲ್ಲಿ ಸ್ನೇಹಿತರೊಂದಿಗೆ ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಹೃದಯಾಘಾತದಿಂದ 25 ವರ್ಷದ ಯುವಕ ಸಾವನ್ನಪ್ಪಿದ್ದು, ಯುವಕ ಕಾಕ್ ಎತ್ತಿಕೊಳ್ಳುವ ವೇಳೆಯೇ ಹಾರ್ಟ್ ಅಟ್ಯಾಕ್ ಸಂಭವಿಸಿದೆ.ಎದೆ ಝಲ್ ಅನ್ನೋ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮೃತ ಯುವಕನನ್ನು ರಾಕೇಶ್ ಎಂದು ಗುರುತಿಸಲಾಗಿದೆ. ಈತ ಖಮ್ಮಂ ಜಿಲ್ಲೆಯ ತಲ್ಲಡದ ಮಾಜಿ ಉಪ ಸರಪಂಚ್ ಗುಂಡ್ಲ ವೆಂಕಟೇಶ್ವರಲು ಅವರ ಪುತ್ರನಾಗಿದ್ದಾನೆ.ಸ್ನೇಹಿತರ ಜತೆ ಶೆಟಲ್ ಆಡುವಾಗ ಏಕಾಏಕಿ ರಾಕೇಶ್ ಕುಸಿದು ಬಿದ್ದಿದ್ದಾನೆ.
ಸ್ನೇಹಿತರು ಸ ಕೂಡಲೇ ಅತನನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಆದಾಗಲೇ ರಾಕೇಶ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಅರೋಗ್ಯವಾಗಿದ್ದ ರಾಕೇಶ್ ಗೆ ಯಾವುದೇ ತೊಂದರೆ ಇರಲಿಲ್ಲ. ಖುಷಿಯಾಗಿ ಆಟವಾಡುವಾಗ ಕೆಳಗೆ ಬಿದ್ದಿದ್ದು, ಸ್ನೇಹಿತರು ಶಾಕ್ ಆಗಿದ್ದಾರೆ.




