ಚಿಟಗುಪ್ಪ : ತಾಲ್ಲೂಕಿನ ತಾಳಮಡಗಿ ಗ್ರಾಮದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಯುವಕರು,ಮುಖಂಡರು ಬಣ್ಣದ ಓಕಳಿಯಲ್ಲಿ ಮಿಂದೆದ್ದು ಹೋಳಿ ಹಬ್ಬ ಸಂಭ್ರಮದಿಂದ ಆಚರಣೆ ಮಾಡಿದರು.
ಗ್ರಾಮದ ಹನುಮಾನ ಮಂದಿರದ ಹತ್ತಿರ ಶನಿವಾರ ಹೋಳಿ ಹಬ್ಬದ ನಿಮಿತ್ತ 30 ಅಡಿ ಎತ್ತರದಲ್ಲಿ ಮೋಸರಿನ ಗಡಗಿ ಕಟ್ಟಲಾಗಿತ್ತು.ಗ್ರಾಮದ ಪ್ರಮುಖ ಯುವಕರು,ಮುಖಂಡರು ಪಾಲ್ಗೊಂಡು ಡಿಜೆ ಸೌಂಡ್ಗೆ ಸಖತ್ ಸ್ಟೆಪ್ಸ್ ಹಾಕಿ ಎಂಜಾಯ್ ಮಾಡಿದರು.
ಡಿಜೆ ಮ್ಯೂಜಿಕ್,ರೈನ್ ಡ್ಯಾನ್ಸ್ ಇದ್ದಿದ್ದರಿಂದ ಅನೇಕರು ರಂಗಿನಾಟದಲ್ಲಿ ಭಾಗಿಯಾಗಿ ಪರಸ್ಪರ ಒಬ್ಬರಿಗೊಬ್ಬರು ಬಣ್ಣ ಎರಚುವ ಮೂಲಕ ಸಂಭ್ರಮಿಸಿದರು.
ಬೆಳಗ್ಗೆಯಿಂದ ಮದ್ಯಾಹ್ನ 12 ಗಂಟೆವರೆಗೆ ಯುವಕರು ಬೊಬ್ಬೆ ಹಾಕುತ್ತ ಕುಣಿದು ಕುಪ್ಪಳಿಸಿ ನಂತರ ಮೋಸರಿನ ಗಡಗಿ ಒಡೆದು ಹೋಳಿ ರಂಗಿನಾಟಕ್ಕೆ ತೆರೆ ಎಳೆದರು.
ವರದಿ : ಸಜೀಶ ಲಂಬುನೋರ