ಉಗುರುಗಳ ಬೆಳವಣಿಗೆಯು ಜೀವಿತಾವಧಿಗೆ ಸಂಬಂಧಿಸಿದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು. ನಿಮ್ಮ ದೀರ್ಘಾಯುಷ್ಯದ ರಹಸ್ಯವು ನಿಮ್ಮ ಕೈಯಲ್ಲಿಯೇ ಇದೆ. ನಿಮ್ಮ ಉಗುರುಗಳು ನಿಮ್ಮ ವಯಸ್ಸು ಮತ್ತು ಆರೋಗ್ಯವನ್ನು ಹೇಳುತ್ತವೆ. ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನ ಸಂಶೋಧಕರು. ನಡೆಸಿದ ಅಧ್ಯಯನದಲ್ಲಿ ಈ ಸತ್ಯ ಬಹಿರಂಗಗೊಂಡಿದೆ. ಹಾಗಾದರೆ ಇದರಿಂದ ಮನುಷ್ಯನ ಸಾವು ಹೇಗೆ ನಿರ್ಧಾರವಾಗುತ್ತೆ? ಯಾರು ಹೆಚ್ಚು ಕಾಲ ಬದುಕುತ್ತಾರೆ? ಯಾರು ಬೇಗನೆ ಸಾಯುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಮರಣ ಯಾವಾಗ, ಹೇಗೆ ಸಂಭವಿಸುತ್ತದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ ಆದರೂ ಕೂಡ ನಾವು ಎಷ್ಟು ಕಾಲ ಬದುಕಬಹುದು ಎಂಬುದನ್ನು ತಿಳಿಯಲು ಪ್ರತಿಯೊಬ್ಬರೂ ಕುತೂಹಲ ಹೊಂದಿರುತ್ತಾರೆ. ಆದರೆ ನಾವು ಎಷ್ಟು ದಿನ ಬದುಕಬಹುದು ಎಂದು ಯಾರನ್ನಾದರೂ ಕೇಳಿದಾಗ, ನಮಗೆ ಸಿಗುವ ಉತ್ತರ, ಜೀವನ ಮತ್ತು ಸಾವು ಎರಡೂ ಆ ದೇವರ ಕೈಯಲ್ಲಿದೆ. ನಾವು ಅವನ ಇಚ್ಛೆಯಂತೆ ನಡೆಯುವುದು ಮಾತ್ರ ಎಂದು ತಿಳಿದವರು ಹೇಳುವುದನ್ನು ನೀವು ಹಲವು ಬಾರಿ ಕೇಳಿರಬಹುದು. ಆದರೆ ಜೀವನ ಮತ್ತು ಸಾವಿನ ನಡುವಿನ ಸಂಬಂಧ ನಿಮ್ಮ ಉಗುರುಗಳಲ್ಲಿ ಅಡಗಿದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು. ನಾವು ಎಷ್ಟು ಕಾಲ ಬದುಕಬಹುದು ಎಂಬುದನ್ನು ಕಂಡುಕೊಳ್ಳಬಹುದು. ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನ ಸಂಶೋಧಕರಾದ ಡೇವಿಡ್ ಸಿಂಕ್ಲೇರ್ ಎನ್ನುವವರು ಈ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ಉಗುರುಗಳ ಬೆಳವಣಿಗೆಯ ಆಧಾರದ ಮೇಲೆ, ಮನುಷ್ಯನ ಸಾವು ನಿರ್ಧಾರವಾಗುತ್ತೆ ಒಬ್ಬ ವ್ಯಕ್ತಿಯು ಯಾವಾಗ ಸಾಯುತ್ತಾನೆ ಮತ್ತು ಅವನ ಜೀವಿತಾವಧಿ ಎಷ್ಟು ಕಾಲ ಇರುತ್ತದೆ ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ. ಆದರೆ ಇದಕ್ಕೆ ಉತ್ತರವನ್ನು ಈಗ ಜೆನೆಟಿಕ್ಸ್ ತಜ್ಞ ಡಾ. ಡೇವಿಡ್ ಸಿಂಕ್ಲೇರ್ ಕಂಡುಹಿಡಿದಿದ್ದಾರೆ. ಹೌದು, ಒಂದು ಅಧ್ಯಯನದ ಪ್ರಕಾರ, ಉಗುರುಗಳ ಆರೋಗ್ಯ ಮತ್ತು ಅವುಗಳ ಬೆಳವಣಿಗೆಯು ವ್ಯಕ್ತಿಯ ಜೀವಿತಾವಧಿಯನ್ನು ನಿರ್ಧರಿಸುತ್ತದೆ ಮತ್ತು ಅವನು ಯಾವಾಗ ಸಾಯುತ್ತಾನೆ ಎಂದು ಹೇಳುತ್ತದೆ ಎಂದು ಅವರು ಕಂಡುಕೊಂಡಿದ್ದಾರೆ.
ಯಾರು ಹೆಚ್ಚು ಕಾಲ ಬದುಕುತ್ತಾರೆ?
ಡಾ. ಡೇವಿಡ್ ಸಿಂಕ್ಲೇರ್ ಅವರ ಪ್ರಕಾರ, ನಿಮ್ಮ ಉಗುರುಗಳ ಆರೋಗ್ಯವು ದೇಹದಲ್ಲಿ ಹೊಸ ಜೀವಕೋಶಗಳು ರೂಪುಗೊಳ್ಳುವ ವೇಗವನ್ನು ತೋರಿಸುತ್ತದೆ ಎಂದು ಹೇಳಿದ್ದು, ಅವರ ಸಂಶೋಧನೆಯ ಪ್ರಕಾರ, ನಿಮ್ಮ ಉಗುರುಗಳು ವೇಗವಾಗಿ ಬೆಳೆಯುತ್ತಿದ್ದರೆ, ವಯಸ್ಸು ನಿಧಾನವಾಗಿ ಬೆಳೆಯುತ್ತಿದೆ ಎಂಬುದನ್ನು ನೀವು ತಿಳಿದುಕೊಳ್ಳಬಹುದು. ಅಂದರೆ ನೀವು ಹೆಚ್ಚು ಕಾಲ ಬದುಕುತ್ತಿರಿ. ಹಾಗಾಗಿ ನಿಮ್ಮ ಉಗುರುಗಳ ಬೆಳವಣಿಗೆಯನ್ನು ಸರಿಯಾಗಿ ಗಮನಿಸುವುದು ಬಹಳ ಮುಖ್ಯವಾಗಿದೆ. ಇದರಿಂದ ನೀವು ಹೆಚ್ಚು ಕಾಲ ಬದುಕುತ್ತೀರೋ ಇಲ್ಲವೋ ಎಂಬುದನ್ನು ನೀವೇ ತಿಳಿದುಕೊಳ್ಳಬಹುದು.