ಧಾರವಾಡದ ಯೂಟ್ಯೂಬ್ ಕಾಮಿಡಿಯನ್ ಖ್ವಾಜಾ ಶಿರಹಟ್ಟಿ ಊರ್ಫ್ ಮುಕಳೆಪ್ಪ, ಇನ್ನೂ 8 ಜನ ಹುಡುಗಿಯರ ಜೊತೆ ಸಂಬಂಧ ಹೊಂದಿದ್ದಾನೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೊಸ ಬಾಂಬ್ ಸಿಡಿಸಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಹುಡುಗಿಯರ ಬ್ರೇನ್ ವಾಷ್ ಮಾಡುವುದು, ಬ್ಲ್ಯಾಕ್ ಮ್ಯಾಜಿಕ್ ಮಾಡುವುದು ಮುಸ್ಲಿಂರಲ್ಲಿ ನಡೆದೇ ಇದೆ. ಖ್ವಾಜಾ ಯಾರ್‍ಯಾರ ಜೊತೆ ಸಂಬಂಧ ಹೊಂದಿದ್ದಾನೆ ಎಂಬುದನ್ನು ಶೀಘ್ರದಲ್ಲೇ ಬಹಿರಂಗಪಡಿಸುತ್ತೇವೆ. ಮೋಸದಿಂದ ಆತ ಹಿಂದೂ ಹುಡುಗಿಯನ್ನು ಮದುವೆಯಾಗಿದ್ದಾನೆ. ಒಂದೇ ದಿನ ಆತ ಮದುವೆ ರಿಜಿಸ್ಟರ್, ಒಂದೇ ದಿನ ಮನೆಯ ಬಾಡಿಗೆ ಪತ್ರ ಎಲ್ಲವನ್ನೂ ಮಾಡಿಸಿದ್ದಾನೆ. ಒಂದೇ ದಿನ ಇದೆಲ್ಲ ಹೇಗೆ ಆಗುತ್ತದೆ?. ಮುಂಡಗೋಡ ರಿಜಿಸ್ಟರ್ ಅಮಾನತ್ತಾಗಬೇಕು. ಮುಕಳೆಪ್ಪನಿಗೆ ಸಪೋರ್ಟ್ ಮಾಡುವವರಿಗೂ ಶಿಕ್ಷೆಯಾಗಬೇಕು. ಯಾವುದೇ ಪರಿಸ್ಥಿತಿಯಲ್ಲೂ ಗಾಯತ್ರಿಯನ್ನು ಖ್ವಾಜಾ ಜೊತೆ ಹೋಗಲು ನಾವು ಬಿಡುವುದಿಲ್ಲ. ಇಸ್ಲಾಮಿನ ಶಕ್ತಿಯ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ಅವಳು ಸದ್ಯ ಸಾಂತ್ವನ ಕೇಂದ್ರದಲ್ಲಿದ್ದಾಳೆ. ಅವಳ ಬ್ರೇನ್ ವಾಷ್ ಮಾಡಿರುವುದರಿಂದ ಆಕೆ ಸುಳ್ಳು ಹೇಳುತ್ತಿದ್ದಾಳೆ. ಮುಸ್ಲಿಂರ ಈ ಆಟ ನಡೆಯುವುದಿಲ್ಲ. ಇನ್ನು ಮುಂದೆ ಇವರ ಆಟ ನಡೆಯುವುದಿಲ್ಲ. ಅವನ ಯೂಟ್ಯೂಬ್ ಚಾನೆಲ್ ಬಂದ್ ಆಗುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದರು.
ವರದಿ :ಮಹಾಂತೇಶ್ ಎಸ್ ಹುಲಿಕಟ್ಟಿ




