Ad imageAd image

ಯುವ ಕಾಂಗ್ರೆಸ್ ಚುನಾವಣೆ; ಡಿ .ಎಸ್ ಹುಲಿಗೇರಿ ಬೆಂಬಲಿಗರೆ ಮೇಲುಗೈ :-ಶಿವಶಂಕರಗೌಡ

Bharath Vaibhav
ಯುವ ಕಾಂಗ್ರೆಸ್ ಚುನಾವಣೆ; ಡಿ .ಎಸ್ ಹುಲಿಗೇರಿ  ಬೆಂಬಲಿಗರೆ ಮೇಲುಗೈ :-ಶಿವಶಂಕರಗೌಡ
WhatsApp Group Join Now
Telegram Group Join Now

ಮುದಗಲ್ಲ : ಪತ್ರಿಕೆ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಡಿ ಮಾತನಾಡಿದ ಮುದಗಲ್ ಮುದಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶಂಕರಗೌಡ ಅವರು ಎಐಸಿಸಿ ಚುನಾವಣೆ ಸಮಿತಿ ಯುವ ಕಾಂಗ್ರೆಸ್‌ನ ಎಲ್ಲ ಹಂತದ ಘಟಕಗಳಿಗೆ ನೋಂದಣಿ ಮಾಡಿಕೊಂಡಿತ್ತು. ರಾಜ್ಯ ಘಟಕ, ಜಿಲ್ಲಾ ಘಟಕ, ಬ್ಲಾಕ್‌ ಘಟಕಗಳಿಗೆ ವಿವಿಧ ಹುದ್ದೆಗಳಿಗೆ ಏಕ ಕಾಲಕ್ಕೆ ಮತದಾನ ನಡೆದಿತ್ತು ಲಿಂಗಸೂರು ಯುವ ಕಾಂಗ್ರೆಸ್ ಚುನಾವಣೆಯಲ್ಲಿ 245 ಮತಗಳ ಅಂತರದಿಂದ ಸಂತೋಷ ಸೋಪ್ಪಿಮಠ ಪೂಜಾರಿ ಅವರು ಮುದಗಲ್ಲ ಅಬ್ದುಲ್ ಖದೀರ್ ಅವರು 545 ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ ಮೌನೇಶ ಪೂಜಾರಿ 1451ಅಂತರ ಮತಗಳಿಂದ ಗೆಲುವು ಸಾಧಿಸಿದ್ದಾರೆ ಹಾಗೂ ಹುಸೇನ್ ಬಾಷ ಮುನ್ನ ಅವರು 6795 ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮತಗಳಿಂದ ಅಂತರದಿಂದ ಗೆಲವು ಸಾಧಿಸಿದ್ದಾರೆ ಎಂದು ಮಾಹಿತಿ ನೀಡಿದರು

ಮತದಾರರಿಗೆ ನಮಿಸುವೆ, ಖದೀರ್ ನಿಮ್ಮ ಪ್ರೀತಿಗೆ ಋಣಿ:
ತಮ್ಮ ಭರ್ಜರಿ ಗೆಲುವಿಗೆ ಸಂತಸ ವ್ಯಕ್ತಪಡಿಸಿರುವ ಖದೀರ್ ಪಾನ್ ವಾಲೆ ಅವರು, ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಮುದಗಲ್ಲ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅತಿ ಹೆಚ್ಚು ಮತಗಳನ್ನು ನೀಡಿ ಗೆಲ್ಲಿಸಿರುವ ಎಲ್ಲ ಯುವ ಮತದಾರರಿಗೆ ವಿನಮ್ರವಾಗಿ ನಮಿಸುತ್ತೇನೆ. ಅತ್ಯಂತ ಸಾಮಾನ್ಯ ಕಾರ್ಯಕರ್ತನಾಗಿದ್ದ ನನ್ನನ್ನು ಗುರುತಿಸಿ, ಮಾರ್ಗದರ್ಶನ ನೀಡಿದ
ಮುದಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶಂಕರಗೌಡ , ಪುರಸಭೆ ಸದಸ್ಯ ರಾದ ಎಸ್ ಆರ್ ರಸೂಲ್ ಸಾಬ ,ಪುರಸಭೆ ಉಪಾಧ್ಯಕ್ಷ ರಾದ ಅಜ್ಮೀರ್ ಬೆಳಿಕಟ್ಟ್ ಹಾಗೂ ತಮ್ಮಣ್ಣ ಗುತ್ತಿಗೆದಾರ ಅವರು
ಪ್ರತಿ ಹಂತದಲ್ಲೂ ಬೆಳವಣಿಗೆಗೆ ಅಭಯ ಹಸ್ತವಾಗಿ ನಿಂತಿರುವ ಅವರ ಪ್ರೀತಿಗೆ ನಾನು ಋಣಿ ಎಂದು ಹೇಳಿದ್ದಾರು..

ಈ ಸಂದರ್ಭದಲ್ಲಿ ತಮ್ಮಣ್ಣ ಗುತ್ತಿಗೆದಾರ ಎಸ್ ಆರ್ ರಸೂಲ್ ಈ ಸಂದರ್ಭದಲ್ಲಿ ಮಾತನಾಡಿದರು

ಈ ಸಂದರ್ಭದಲ್ಲಿ ಮುದಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶಂಕರಗೌಡ , ಪುರಸಭೆ ಸದಸ್ಯ ರಾದ ಎಸ್ ಆರ್ ರಸೂಲ್ ಸಾಬ ,ಪುರಸಭೆ ಉಪಾಧ್ಯಕ್ಷ ರಾದ ಅಜ್ಮೀರ್ ಬೆಳಿಕಟ್ಟ್ ಹಾಗೂ ತಮ್ಮಣ್ಣ ಗುತ್ತಿಗೆದಾರ , ಪರಮೇಶ ಕನ್ನಾಪೂರ ಹಟ್ಟಿ , ಸಂಗಪ್ಪ ಹಿರೇಮನಿ ,ರಾಘವೇಂದ್ರ ಕುದರಿ, ಮೌಲಾಸಾಬ ಜಂಗ್ಲಿ , ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು..

ವರದಿ:- ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!