ಬಾಗಲಕೋಟೆ : ಸಿದ್ದಾರಾಮಯ್ಯನವರ ಆಪ್ತ ,ಯುವ ಮುಖಂಡ ಹೊಳಬಸು ಶೆಟ್ಟರ ರವರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಅವಕಾಶ ನೀಡಬೇಕೆಂದು ಮನವಿ ಮಾಡಿದ ಅಪಾರ ಬೆಂಬಲಿಗರು.
ಸಿದ್ದರಾಮಯ್ಯನವರ ಅಬಿಮಾನಿ ಬಳಗದ ವತಿಯಿಂದ ಇಂದು ಬೆಂಗಳೂರಿನ ಮುಖ್ಯಮಂತ್ರಿಗಳ ಕಚೇರಿ ಕೃಷ್ಣಾ ದಲ್ಲಿ ಬಾದಾಮಿ ಬಾಗಲಕೋಟೆಯಿಂದ ಸುಮಾರು ಎರಡು ಸಾವಿರ ಜನ ಅಬಿಮಾನಿ ಬಳಗದವರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸೇರಿ ರಾಜ್ಯದ ಮುಖ್ಯಮಂತ್ರಿ ಗಳಾದ ಸಿದ್ದರಾಮಯ್ಯನವರಿಗೆ ಸಿದ್ದಾರಾಮಯ್ಯನವರ ಆಪ್ತ ,ಯುವ ಮುಖಂಡರಾದ ಹೊಳಬಸು ಶೆಟ್ಟರ ರವರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಅವಕಾಶ ನೀಡಬೇಕೆಂದು ಮನವಿ ಸಲ್ಲಿಸಿದರು.
ಕಳೆದ 2018 ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಬಾದಾಮಿಯಿಂದ ಸ್ಪರ್ಧೆ ಮಾಡಿದ್ದಾಗ ಅವರ ಗೆಲುವಿಗೆ ಕಾಂಗ್ರೆಸ್ ನ ಯುವ ಮುಖಂಡ ಸಿದ್ದರಾಮಯ್ಯನವರ ಆಪ್ತ ಹೊಳಬಸು ಶೆಟ್ಟರ ಅವರ ಅವಿರತ ಪ್ರಯತ್ನ ಹಾಗೂ ಶ್ರಮ ತುಂಬಾ ಇದೆ ಎಂದು ಅಭಿಮಾನಿಗಳು ನೆನಪಿಸಿದರು.
ಇದಕ್ಕೆ ಮಾನ್ಯ ಮುಖ್ಯಮಂತ್ರಿ ಗಳಾದ ಶ್ರೀ ಸಿದ್ದರಾಮಯ್ಯನವರು ಸಕಾರಾತ್ಮಕವಾಗಿ ಭರವಸೆ ನೀಡಿದರು ಎಂದು ತಿಳಿದುಬಂದಿದೆ ಎನ್ನಲಾಗ್ತಾ ಇದೆ.
ವರದಿ : ರಾಜೇಶ್. ಎಸ್. ದೇಸಾಯಿ