ಅಹ್ಮದಾಬಾದ್: ಐಪಿಎಲ್ ಪಂದ್ಯಾವಳಿಯಲ್ಲಿ ಕಳೆದ ಬಾರಿ ಆರ್ ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ಕ್ವಾಲಿಪಾಯರ್-1 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ನಯ್ಯರ ಸೆಲೆಬ್ರೆಶನ್ ಯುದ್ದ ನಡೆದಿತ್ತು.
ಈಗ ಇಂದು ಮತ್ತೇ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಎರಡೂ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯುತ್ತಿದ್ದು, ಶ್ರೇಯಸ್ ಅಯ್ಯರ ಹಾಗೂ ವಿರಾಟ್ ಕೊಹ್ಲಿ ನಡುವಣದ ಈ ಹಳೆಯ ಸೆಲೆಬ್ರೆಶನ್ ಜಿದ್ದಾ ಜಿದ್ದಿ ಈ ಪಂದ್ಯದಲ್ಲೂ ಮುಂದುವರೆಯುವುದೇ ಎಂಬುದನ್ನು ಕಾಯ್ದು ನೋಡಬೇಕು. ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಂತೂ ಈ ಇಬ್ಬರ ನಡುವಿನ ಸೆಲೆಬ್ರೇಶನ್ ಯುದ್ದ ತುಂಬಾ ಗಮನ ವಿಟ್ಟು ವೀಕ್ಷಿಸಲಿದ್ದಾರೆ.



