ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಕೇಂದ್ರ ಸರ್ಕಾರ ‘ಝಡ್’ ಶ್ರೇಣಿಯ ಸಿಆರ್ಪಿಎಫ್ ಭದ್ರತೆಯನ್ನು ನೀಡಿದೆ ಎಂದು ವರದಿಯಾಗಿದೆ.
ರಾಜೀವ್ ಕುಮಾರ್ ಅವರು ಝಡ್-ಕೆಟಗರಿ ಭದ್ರತೆಯನ್ನು ಪಡೆದ ನಂತರ ದೇಶಾದ್ಯಂತ ಎಲ್ಲಿಗೆ ಹೋದರೂ ಈ ಭದ್ರತೆ ಅವರ ಬಳಿ ಇರುತ್ತದೆ.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೆ ‘ಝಡ್’ ಶ್ರೇಣಿಯ ಭದ್ರತೆ ನೀಡಲಾಗಿದೆ. ಐಬಿಯ ಮಾಹಿತಿಯ ಆಧಾರದ ಮೇಲೆ, ಗೃಹ ಸಚಿವಾಲಯವು ಸಿಇಸಿ ರಾಜೀವ್ ಕುಮಾರ್ ಅವರಿಗೆ ‘ಝಡ್’ ವರ್ಗದ ಭದ್ರತೆಯನ್ನು ನೀಡಿದೆ.
ಗುಪ್ತಚರ ಸಂಸ್ಥೆ ಐಬಿ ವರದಿಯ ಆಧಾರದ ಮೇಲೆ ರಾಜೀವ್ ಕುಮಾರ್ ಅವರಿಗೆ ಗೃಹ ಸಚಿವಾಲಯವು ಝಡ್-ವರ್ಗದ ಭದ್ರತೆಯನ್ನು ನೀಡಿದೆ ಎಂದು ಮೂಲಗಳು ತಿಳಿಸಿದೆ.