Ad imageAd image

ಜೀ ಕನ್ನಡದ ಸರಿಗಮಪ ಆಡಿಷನ್ ವಿಜಯಪುರದಲ್ಲಿ ದಿ. 22/09/2024 ಇದೇ ಭಾನುವಾರ

Bharath Vaibhav
ಜೀ ಕನ್ನಡದ ಸರಿಗಮಪ ಆಡಿಷನ್ ವಿಜಯಪುರದಲ್ಲಿ ದಿ. 22/09/2024 ಇದೇ ಭಾನುವಾರ
WhatsApp Group Join Now
Telegram Group Join Now

ವಿಜಯಪುರ:-ನಿಮ್ಮ ಕನಸಿಗೆ ರೆಕ್ಕೆ ಕಟ್ಟಲು ನಿಮ್ಮೂರಿಗೂ ಬರ್ತಿದೆ ಸರಿಗಮಪ ಆಡಿಷನ್, ತನ್ನ ವಿಭಿನ್ನ ರಿಯಾಲಿಟಿ ಶೋಗಳ ಮೂಲಕ ಸಾಕಷ್ಟು ಯುವ ಪ್ರತಿಭೆಗಳನ್ನ ಕರುನಾಡಿಗೆ ಪರಿಚಯಿಸಿರುವ ಕನ್ನಡದ ನಂ 1ವಾಹಿನಿ ಜೀ಼ ಕನ್ನಡ , ಈಗ ಮತ್ತೊಮ್ಮೆ ಸರಿಗಮಪ ರಿಯಾಲಿಟಿ ಶೋ ಮೂಲಕ ಕರುನಾಡಿನ ಹಾಡುಗರನ್ನ ಹುಡುಕುವ ಕೆಲಸ ಶುರುಮಾಡಿದೆ. ಜೀ಼ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋಗಳಾದ ಡ್ರಾಮಾ ಜೂನಿಯರ್ಸ್, ಕಾಮಿಡಿ ಕಿಲಾಡಿಗಳು,ಡಿಕೆಡಿ ಮತ್ತು ಮಹಾನಟಿ ಮೂಲಕ ಈಗಾಗಲೆ ಸಾಕಷ್ಟು ನಟ-ನಟಿಯರು ,ಗಾಯಕ ಗಾಯಕಿಯರು ಹಾಗು ಕೊರಿಯೋಗ್ರಾಫರ್ ಗಳನ್ನ ಕರುನಾಡಿಗೆ ಕೊಟ್ಟಿರುವ ಜೀ಼ ಕನ್ನಡ ವಾಹಿನಿ ಇದೀಗ ಸರಿಗಮಪ ಶೋ ಮೂಲಕ ನಿಮ್ಮೂರಿನಲ್ಲಿರುವ ಗಾಯಕ- ಗಾಯಕಿಯಾಗುವ ಕನಸು ಹೊತ್ತಿರುವ,ಪ್ರತಿಭೆಗಳಿಗೆ ವೇದಿಕೆಯಾಗಲು ಬಂದಿದೆ.

ಕಳೆದ ಬಾರಿ ವಿದೇಶಿ ಕನ್ನಡಿಗ ಪ್ರತಿಭೆಗಳೊಂದಿಗೆ ಕನ್ನಡದ ಕಂಪನ್ನ ಜಗತ್ತಿಗೆ ಬಿತ್ತರಿಸಿ ಸರಿಗಮಪ ಈ ಬಾರಿ 6 ರಿಂದ 60 ವಯಸ್ಸಿನ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಸಜ್ಜಾಗಿದೆ. ಈ ಮೂಲಕ ಕನ್ನಡದ ಸಂಗೀತ ಮತ್ತು ಚಿತ್ರರಂಗಕ್ಕೆ ಭರವಸೆಯ ಗಾಯಕ-ಗಾಯಕಿಯರನ್ನ ನೀಡುವ ಕೆಲಸವನ್ನ ಈ ರಿಯಾಲಿಟಿ ಶೋ ಮಾಡಲಿದೆ.ಸರಿಗಮಪ ಶೋ ಮೂಲಕ ಹಲವಾರು ಪ್ರತಿಭೆಗಳು ಹೊರಹೊಮ್ಮಿ ಇಂದು ಸಂಗೀತ ಲೋಕದ ಸಾಧಕರ ಸಾಲಿಗೆ ಸೇರಿದ್ದಾರೆ, ನಿಮ್ಮ ಕನಸನ್ನ ನನಸು ಮಾಡುವ ನಿಟ್ಟಿನಲ್ಲಿ ನಿಮ್ಮೂರಿಗೆ ಬಂದು, ನಿಮ್ಮ ಪ್ರತಿಭಯೆನ್ನ ಗುರುತಿಸಿ ನಿಮ್ಮನ್ನ ಈ ವೇದಿಕೆ ಕರೆತರುವ ಕೆಲಸವನ್ನ ಈ ಮೂಲಕ ಮಾಡಲಿದೆ.

ಸರಿಗಮಪ ಶೋಗಾಗಿ ಕರ್ನಾಟಕದ ಆಯ್ದ ಜಿಲ್ಲೆಗಳಲ್ಲಿ ಆಡಿಷನ್ ಪ್ರಕ್ರಿಯೆ ನಡೆಸಲ್ಲಿದ್ದು ,ಇದರ ಆರಂಭಿಕ ಹಂತವೆಂಬಂತೆ 22-09-2024 ಭಾನುವಾರ ಬೆಳಗ್ಗೆ 9 ಗಂಟೆಗೆ..

#ಆಡಿಷನ್ ನಡೆಯುವ ಸ್ಥಳ :-BLDEA’S ಸಮನ್ವಯ ಆಂಗ್ಲ ಮಾಧ್ಯಮ ಶಾಲೆ,ಪಾಟೀಲ್ ಹೋಂಡಾ ಶೋರೂಂ ಎದುರು,ವಿ2 & ಎಸ್ಎಸ್ ಪಿಯು ಕಾಲೇಜ್ ಹತ್ತಿರ,BLDE ರಸ್ತೆ,ವಿಜಯಪುರ.ಇಲ್ಲಿ ಆಡಿಷನ್ಸ್ ನಡೆಯಲ್ಲಿದ್ದು.ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಇಚ್ಚಿಸುವವರು 2 ಪಾಸ್ಪೋರ್ಟ್ ಸೈಜ್ ಪೋಟೋ ಜೊತೆ ಅಡ್ರಸ್p ಪ್ರೂಫ್ ಜೆರಾಕ್ಸ್ ತೆಗೆದುಕೊಂಡು ಬಂದು ಭಾಗವಹಿಸಬಹುದಾಗಿದೆ. ಜೀ಼ ಕನ್ನಡ ನಡೆಸುವ ಈ ಆಡಿಷನ್ ಪ್ರಕ್ರಿಯೆಯಲ್ಲಿ ಯಾವುದೇ ಹಣವನ್ನ ಪಡೆಯಲಾಗುವುದಿಲ್ಲವೆಂದು ವಾಹಿನಿ ತಿಳಿಸಿದೆ.

ವರದಿ:- ರಾಜೇಶ್. ಎಸ್. ದೇಸಾಯಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!