———————————————————-ಚುಟುಕು ತ್ರಿಕೋನ ಕ್ರಿಕೆಟ್ ಸರಣಿ: ಕಿವೀಸ್ ಗೆ 60 ರನ್ ಗಳ ಜಯ
ಹರಾರೆ ( ಜಿಂಬಾಬ್ವೆ): ನ್ಯೂಜಿಲೆಂಡ್ ಕ್ರಿಕೆಟ್ ತಂಡ ಇಲ್ಲಿನ ಹರಾರೆ ಸ್ಪೋಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಟ್ವೆಂಟಿ-20 ತ್ರಿಕೋನ ಕ್ರಿಕೆಟ್ ಸರಣಿಯ ಪಂದ್ಯದಲ್ಲಿಂದು ಆತಿಥೇಯ ಜಿಂಬಾಬ್ವೆ ವಿರುದ್ಧ 60 ರನ್ ಗಳಿಂದ ಜಯಗಳಿಸಿತು.

ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು ನಿಗದಿತ 20 ಓವರುಗಳಲ್ಲಿ 6 ವಿಕೆಟ್ ಗೆ 190 ರನ್ ಗಳಿಸಿತ್ತು. 191 ರನ್ ಗಳ ಗುರಿ ಬೆನ್ನಟ್ಟಿದ ಜಿಂಬಾಬ್ವೆ 18.5 ಓವರುಗಳಲ್ಲಿ 130 ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಪರಾಭವಗೊಂಡಿತು. ನ್ಯೂಜಿಲೆಂಡ್ ಪರವಾಗಿ ವಿಕೆಟ್ ಕೀಪರ್ ಬ್ಯಾಟ್ಸಮನ್ ಶೆಪರ್ಡ್ 45 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ನೆರವಿನಿಂದ 75 ರನ್ ಗಳಿಸಿದರು.
ರಚಿನ್ ರವೀಂದ್ರ 39 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ನೆರವಿನಿಂದ 63 ರನ್ ಗಳಿಸಿದರು. ಜಿಂಬಾಬ್ವೆ ಪರವಾಗಿ ಗಾರವಾ 34 ಕ್ಕೆ 4 ವಿಕೆಟ್ ಪಡೆದರು. ಉತ್ತಮ ಮೊತ್ತದ ಗುರಿ ಬೆನ್ನಟ್ಟಿದ ಜಿಂಬಾಬ್ವೆ ಪರವಾಗಿ ಟೋನಿ ಮುನಯುಂಗಾ ಮಾತ್ರ ಕೊಂಚ ಪ್ರತಿರೋಧ ತೋರಿ 30 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ನೆರವಿನಿಂದ 40 ರನ್ ಗಳಿಸಿದರು. ನ್ಯೂಜಿಲೆಂಡ್ ಪರವಾಗಿ ಇಶ್ ಸೋಧಿ 12 ರನ್ ಗೆ 4 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ಅವರು ಈ ಉತ್ತಮ ಬೌಲಿಂಗ್ ಸಾಧನೆಗಾಗಿ ಪಂದ್ಯ ಶ್ರೇಷ್ಠ ಗೌರವವನ್ನೂ ಪಡೆದರು.




