ಕಲಘಟಗಿ : ಕಾಲೇಜಿನಲ್ಲಿ ಜರುಗಿದ ಧಾರವಾಡ ವಲಯ ಮಟ್ಟದ ಯುವಜನೋತ್ಸವದಲ್ಲಿ ಜೆಎಸ್‌ಎಸ್ ಧಾರವಾಡ ಬನಶಂಕರಿ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ವೀರಾಗ್ರಣಿ ಹಾಗೂ ಧಾರವಾಡ ಕೆಸಿಡಿ ವಿದ್ಯಾರ್ಥಿಗಳು ರನ್ರ‍್ಸಪ್ ಗೆಲುವಿನ ನಗೆಯನ್ನು ಬೀರಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯ ಅಂತರ್ ಕಾಲೇಜು ಧಾರವಾಡ ವಲಯ ಮಟ್ಟದ ಯುವಜನೋತ್ಸವ (ಯುನಿಫೆಸ್ಟ್)-೨೦೨೪ನ್ನು ಗುಡ್‌ನ್ಯೂಸ್ ಕಲಾ ಹಾಗೂ ವಾಣಿಜ್ಯ ಪ್ರಥಮ ದರ್ಜೆ ಮಹಾವಿದ್ಯಾಲಯದ ಆವರಣದಲ್ಲಿ ಮಂಗಳವಾರ ಹಾಗೂ ಬುಧವಾರ ಎರಡು ದಿನಗಳ ಕಾಲ ಯಶಸ್ವಿಯಾಗಿ ನಡೆಸಲಾಯಿತು. ಜೆ.ಎಸ್.ಎಸ್. ಬನಶಂಕರಿ ಕಲಾ ಹಾಗೂ ವಾಣಿಜ್ಯ ಮತ್ತು ಎಸ್‌ಕೆ ಗುಬ್ಬಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ೧೨೦ ಅಂಕಗಳೊದಿ0ಗೆ ಸಮಗ್ರ ವೀರಾಗ್ರಣಿಗಳಾದರು. ಕರ್ನಾಟಕ ಕಲಾ ಹಾಗೂ ವಾಣಿಜ್ಯ ಕಾಲೇಜ ಧಾರವಾಡದ ವಿದ್ಯಾರ್ಥಿಗಳು ತೀವೃ ಪ್ರತಿಸ್ಪರ್ಧೆ ನೀಡಿ ೧೧೦ ಅಂಕಗಳನ್ನು ಪಡೆದು ರನ್ರ‍್ಸಪ್ ಗೆಲುವಿನ ನಗೆಯನ್ನು ಬೀರಿ ಸಂಭ್ರಮಿಸಿದರು. ವಿಜೇತರಿಗೆ ಪ್ರಮಾಣ ಪತ್ರ ಹಾಗೂ ಪಾರಿತೋಷಕಗಳನ್ನು ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ, ಪ್ರಾಚಾರ್ಯ ಡಾ. ಮಹೇಶ ಹೊರಕೇರಿ, ಪ್ರೊ. ಎಸ್.ಕೆ.ಪವಾರ, ಬ್ರ. ಲಿಯೋ, ಡಾ. ಬಿ.ಜಿ.ಬಿರಾದಾರ, ಪ್ರಭಾಕರ ನಾಯಕ, ಮೃತ್ಯುಂಜಯ ಶೆಟ್ಟರ, ರಾಮು ಮೂಲಗಿ, ಜಿ.ವಿ.ಹಿರೇಮಠ, ಎಚ್.ಎಚ್.ನದಾಫ್ ಇನ್ನಿತರರು ನೀಡಿದರು.
ಚಿತ್ರನಟ ಹಾಗೂ ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ ಮಾತನಾಡಿ, ಇಂದಿನ ಯುವ ಸಮೂಹ ಪಾಲಕ ಪೋಷಕರ ಋಣ ತಿರಿಸಬೇಕಿದೆ. ಈ ನಿಟ್ಟಿನಲ್ಲಿ ಗುರುಗಳ ಮಾರ್ಗದರ್ಶನವನ್ನು ಧನ್ಯತಾ ಭಾವದಿಂದ ಸ್ವೀಕರಿಸಿ, ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಾನವೀಯ ಗುಣಗಳೊಂದಿಗೆ ಉಜ್ವಲ ಭವಿಷ್ಯ ನಿರ್ಮಿಸಿಕೊಂಡು ಗಣ್ಯ ವ್ಯಕ್ತಿಗಳಾಗುವ ಗುರಿಯನ್ನು ಜೀವನದಲ್ಲಿ ಹೊಂದಿಕೊ0ಡು ಅದನ್ನು ಸಾಕಾರಗೊಳಿಸಿರಿ ಎಂದು ವಿದ್ಯಾರ್ತಿಗಳನ್ನುದ್ಧೇಶಿಸಿ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಧಾರವಾಡ ವಲಯದಲ್ಲಿನ ೨೬ ಪದವಿ ಕಾಲೇಜುಗಳ ೭೬೦ ವಿದ್ಯಾರ್ಥಿಗಳು ತಮ್ಮ ಕಲಾ ನೈಪುಣ್ಯತೆಯನ್ನು ಪ್ರದರ್ಶಿಸಿದರು. ಶಾಸ್ತ್ರೀಯ ಸಂಗೀತ, ಪಾಶ್ಚಾತ್ಯ ಸಂಗೀತ, ಶಾಸ್ತ್ರೀಯ ವಾದ್ಯ ಸಂಗೀತ, ಸಮೂಹ ಗಾಯನ, ಜಾನಪದ ಹಾಗೂ ಬುಡಕಟ್ಟು ನೃತ್ಯ, ಶಾಸ್ತ್ರೀಯ ನೃತ್ಯ, ರಸ ಪ್ರಶ್ನೆ, ಆಶು ಭಾಷಣ ಒಳಗೊಂಡ0ತೆ ಇತರೇ ಸಾಹಿತ್ಯಾತ್ಮಕ ಚಟುವಟಿಕೆಗಳು, ಪೇಂಟಿ0ಗ, ಕೋಲಾಜ್, ಪೋಸ್ಟರ್ ಮೇಕಿಂಗ, ಕ್ಲೇ ಮೊಡಲಿಂಗ, ಕಾರ್ಟೂನಿಂಗ, ರಂಗೋಲಿ, ಮೆಹಂದಿ ಸೇರಿದಂತೆ ಬೇರೆ ಬೇರೆ ೫ ವಿಭಾಗಗಳಲ್ಲಿನ ಒಟ್ಟೂ ೨೭ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡಿದ್ದರು. ಯುವಜನೋತ್ಸವದ ಎಲ್ಲ ಸ್ಪರ್ಧೆಗಳಿಗೆ ಆಯಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ನುರಿತ ಸಾಹಿತಿಗಳು, ಕಲಾವಿದರುಗಳು ತಮ್ಮ ಪಾರದರ್ಶಕವಾದ ತೀರ್ಪನ್ನು ನೀಡಿ ಭೇಷ ಎನಿಸಿಕೊಂಡರು. ಸ್ಪರ್ಧಾಳು ವಿಜೇತರುಗಳಿಗೆ ಹಾಗೂ ನಿರ್ಣಾಯಕರುಗಳಿಗೆ ಲಾಡ್ ಫೌಂಡೇಶನ್‌ದಿ0ದ ಒದಗಿಸಿರುವ ಅತ್ಯಾಕರ್ಷಕ ಪಾರಿತೋಷಕಗಳು ಹಾಗೂ ಪ್ರಾಯೋಜಕತ್ವ ಹೊಂದಿದ ಗುಡ್‌ನ್ಯೂಸ್ ಪ್ರಥಮ ದರ್ಜೆ ಮಹಾವಿದ್ಯಾಲಯದ ಬಳಗದವರು ಎರಡು ದಿನಗಳ ಕಾಲ ಊಟದ ವ್ಯವಸ್ಥೆಯನ್ನು ಮಾಡಿ ಪ್ರತಿಯೊಬ್ಬರಿಗೂ ನೀಡಿರುವುದಕ್ಕೆ ಸ್ಪರ್ಧಾಳುಗಳು ಎಲ್ಲ ಕಾಲೇಜಿನವರು ತಮ್ಮ ಸಂತಸವನ್ನು ವ್ಯಕ್ತ ಪಡಿಸಿದರು. ಗುಡ್‌ನ್ಯೂಸ್ ಕಲಾ ಹಾಗೂ ವಾಣಿಜ್ಯ ಪ್ರಥಮ ದರ್ಜೆ ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ವಲಯ ಮಟ್ಟದ ಯುವಜನೋತ್ಸವ (ಯುನಿಫೆಸ್ಟ್)-೨೦೨೪ ರ ಯಶಸ್ಸಿಗೆ ಶ್ರಮಿಸಿದರು.
ವರದಿ : ಶಶಿಕುಮಾರ ಕಲಘಟಗಿ