ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನಲ್ಲಿ ಕುರಿಗಾಹಿಗಳಿಗೆ ರಕ್ಷಣೆ ಕೊಡುವಂತೆ ಹಾಗೂ ವಿವಿಧಬೇಡಿಕೆ ಈಡೇರಿಸುವಂತೆ ದಂಡಾಧಿಕಾರಿಗೆ ಮನವಿ ಸಲ್ಲಿಸಿದರು.
ಘಟನೆ ವಿವರ : ಬದಾಮಿ ತಾಲೂಕಿನ ಉಗಲವಾಟ ಗ್ರಾಮದ ಕುರಿಗಾಹಿ ಯುವಕ ಶರಣಪ್ಪ ಜಮ್ಮನಕಟ್ಟಿ ದುಷ್ಕರ್ಮಿಗಳಿಂದ ಬಲಿಯಾದ ಯುವಕ. ಮೂವರು ದುಷ್ಕರ್ಮಿಗಳು ಕುರಿಗಳನ್ನು ಕಳ್ಳತನ ಮಾಡಲು ಮುಂದಾಗಿದ್ದಾರೆ, ಇದನ್ನು ಗಮನಿಸಿದ ಶರಣಪ್ಪ ಕುರಿಗಳನ್ನು ರಕ್ಷಣೆ ಮಾಡಲು ಹೋದಾಗ ದುಷ್ಕರ್ಮಿಗಳು ಶರಣಪ್ಪ ಮನಬಂದಂತೆ ತಳಿಸುವದಲ್ಲದೆ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಈ ಘಟನೆಯನ್ನು ಖಂಡಿಸಿ ಕರ್ನಾಟಕ ಪ್ರದೇಶ ಕುರುಬ ಸಂಘ ಯುವ ಘಟಕ ನಿಡಗುಂದಿ, ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಹಾಗೂ ವಿವಿಧ ಬೇಡಿಕೆ ಎಡೇರಿಸುವಂತೆ ದಂಡಾಧಿಕಾರಿಗಳಿಗೆ ಒತ್ತಾಯಿಸಿದರು. ಮೃತ ಕುಟುಂಬಕ್ಕೆ ಸರಕಾರದಿಂದ ಸೂಕ್ತವಾದ ಪರಿಹಾರ ನೀಡುವುದರ ಜೊತೆಗೆ ಆ ಕುಟುಂಬದ ಒಬ್ಬ ಸದಸ್ಯನಿಗೆ ಸರಕಾರಿ ಉದ್ಯೋಗವನ್ನು ನೀಡಬೇಕು.
* ಕುರುಬರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಹಾಗೂ ನಿಗಮಕ್ಕೆ ಸುಮಾರು 500 ಕೋಟಿ ರೂ. ಮೀಸಲಿಡಬೇಕು.
* ಕುರಿಗಾರರಿಗೆ ಹಿತರಕ್ಷಣೆ ಕಾಯ್ದೆ ಜಾರಿಗೊಳಿಸಬೇಕು.
* ರಾಜ್ಯದ ಎಲ್ಲ ಕುರಿಗಾರರಿಗೆ ಬಂದೂಕಿನ ಪರವಾನಿಗೆ ನೀಡುವುದು ಸರಳೀಕರಣಗೊಳಿಸಬೇಕು.
* ತಾಲೂಕಿಗೆ ಒಂದೊಂದು ಬಂದೂಕು ತರಬೇತಿ ಕೇಂದ್ರವನ್ನು ಸ್ಥಾಪಿಸಬೇಕು.
* ನಿಡಗುಂದಿ ತಾಲೂಕಿಗೆ ಕನಕ ಭವನ ನಿರ್ಮಿಸಬೇಕು.
* ಪ್ರತಿ ಗ್ರಾಮಗಳಿಗೆ ಕುರಿ ಹಾಗೂ ಜಾನುವಾರಗಳನ್ನು ಮೇಯಿಸಲು ಸೌಮದಾನ ಜಾಗವನ್ನು ಮೀಸಲಿರಿಸಬೇಕು.
ರಮೇಶ್ ಮಾಗಿ,ಪರಸು ಕಾರಿ, ಪ್ರಕಾಶ ಜಾಲಗೇರಿ, ಎಸ್ ಎಮ್ ಜೆಲ್ಲಿ, ಬಸವರಾಜ ಹೇರಕಲ್,ನಾರಾಯಣ ಹುಗ್ಗಿ, ಬಸು ಕುರಿ, ಮುತ್ತುರಾಜ ಹಾಲಿಯಾಳ, ಯಲಗುರೇಶ ಮೇಟಿ, ಶಿತಪ್ಪ ಗಣಿ, ರಮೇಶ ಕಮದಾಳ,ಜಾನು ಸಿದ್ಧನಾಥ, ವಿನಾಯಕ ವಂದಾಲ, ಅರ್ಜುನ ದಳವಾಯಿ, ಸಂಗಪ್ಪ ಸಿತಿಮಣಿ,ಮುದ್ದಪ್ಪ ಯಳ್ಳಿಗುತ್ತಿ,ನಾಗರಾಜ ಗುಡಿಹಾಳ,ಬಸವಾಜ ಹುಗ್ಗಿ.
ವರದಿ :ಅಲಿ ಮಕಾನದಾರ