Ad imageAd image

ಇರಾನ್ ಅಧ್ಯಕ್ಷನ ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನ : 65 ತಂಡಗಳಿಂದ ಶೋಧ ಕಾರ್ಯ

Bharath Vaibhav
WhatsApp Group Join Now
Telegram Group Join Now

ಟೆಹ್ರಾನ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ(62) ಮತ್ತು ವಿದೇಶಾಂಗ ಸಚಿವ ಹೊಸೈನ್ ಅಮೀರ್ ಅಬ್ದುಲ್ಲಾಹಿಯಾನ್ ಅವರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಭಾನುವಾರ ಪತನವಾಗಿದೆ.

ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಪತನವಾಗಿರುವ ಶಂಕೆ ಇದ್ದು, 65 ತಂಡಗಳಿಂದ ಶೋಧ ಕಾರ್ಯಾಚರಣೆ ನಡೆಸಲಾಗಿದೆ.ಇಸ್ರೇಲ್ ಜೊತೆ ಇರಾನ್ ಸಂಘರ್ಷ ತಾರಕಕ್ಕೇರಿರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಯೋಗ ಕ್ಷೇಮಕ್ಕಾಗಿ ಪ್ರಾರ್ಥಿಸಿದ್ದಾರೆ. ಇರಾನ್ ಪೂರ್ವ ಪ್ರಾಂತ್ಯದ ಅಜರ್ ಬೈಜಾನ್ ಜೋಲ್ಪಾ ಸಮೀಪದ ದುರ್ಗಮ ಬೆಟ್ಟಗಳಲ್ಲಿ ಭಾನುವಾರ ಹೆಲಿಕಾಪ್ಟರ್ ಪತನವಾಗಿದೆ.

ಅಣೆಕಟ್ಟೆ ಉದ್ಘಾಟನೆಗೆ ಹೋಗಿದ್ದ ಅಧ್ಯಕ್ಷ ರೈಸಿ, ವಿದೇಶಾಂಗ ಸಚಿವ ಅಮೀರ್ ಹಾಗೂ ಅಧಿಕಾರಿಯೊಬ್ಬರು ಮೂರು ಹೆಲಿಕಾಪ್ಟರ್ ತಂಡದೊಂದಿಗೆ ಮರಳುತ್ತಿದ್ದರು. ಎರಡು ಹೆಲಿಕಾಪ್ಟರ್ ಸುರಕ್ಷಿತವಾಗಿ ವಾಪಸ್ ಆಗಿದ್ದು, ಅಧ್ಯಕ್ಷರು ಮತ್ತು ವಿದೇಶಾಂಗ ಸಚಿವರು ಇದ್ದ ಹೆಲಿಕಾಪ್ಟರ್ ಪತನವಾಗಿದೆ.

WhatsApp Group Join Now
Telegram Group Join Now
Share This Article
error: Content is protected !!