ನವದೆಹಲಿ : ಕೆಮ್ಮಿನ ಸಿರಪ್, ಕಣ್ಣಿನ ಡ್ರಾಪ್ ಸೇರಿದಂತೆ 71 ಬಗೆಯ ಔಷಧಿಗಳು ಕಳಪೆ ಗುಣಮಟ್ಟದ್ದಾಗಿವೆ ಎಂದು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ಸಿಒ) ಇತ್ತೀಚೆಗೆ ವರದಿಯನ್ನು ಬಿಡುಗಡೆ ಮಾಡಿದೆ.
ಸಿಡಿಎಸ್ಸಿಒ ಪ್ರಮುಖ ಔಷಧ ನಿಯಂತ್ರಕ ಸಂಸ್ಥೆಯಾಗಿದ್ದು, ಇದು ಔಷಧಿಗಳ ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ಗುಣಮಟ್ಟವನ್ನು ಖಚಿತಪಡಿಸುತ್ತದೆ.
ಸೆಪ್ಟೆಂಬರ್ ತಿಂಗಳಲ್ಲಿ ದೇಶವ್ಯಾಪಿ ನಡೆಸಲಾದ ವಿವಿಧ ಕಂಪನಿಗಳ ವಿವಿಧ ಔಷಧಿಗಳ ಮಾದರಿ ಪರೀಕ್ಷೆವೇಳೆ 71 ಔಷಧಗಳು ಕಳಪೆ ಗುಣಮಟ್ಟ ಹೊಂದಿರುವುದು ಕಂಡುಬಂದಿದೆ. ಕೆಮ್ಮಿನ ಸಿರಪ್, ಕಣ್ಣಿನ ಡ್ರಾಪ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ3 ಮಾತ್ರೆ, ಸೋಡಿಯಂ ಮಾತ್ರೆಗಳು, ಇಂಜೆಕ್ಷನ್ ಸೇರಿವೆ ಎಂದು ಸಂಸ್ಥೆ ಹೇಳಿದೆ.
ಫರೀದಾಬಾದ್‌ನ ಹಿಂದೂಸ್ತಾನ್ ಆಯಂಟಿ ಬಯೋಟಿಕ್ಸ್ ಉತ್ಪಾದಿಸಿದ ಮೆಟ್ರೋನಿಡಾಜೋಲ್ ಐಪಿ400 ಎಂಜಿ ಮಾತ್ರೆ; ರೈನ್‌ಬೋ ಲೈಫ್ ಸೈನ್ಸ್‌ನ ಡೊಮ್‌ಪೆರಿಡಾನ್ ಸಸ್ಪೆಷನ್ಸ್; ಪುಷ್ಕರ್ ಫಾರ್ಮಾದ ಆಕ್ಸಿಟೋಸಿನ್ ಇಂಜೆಕ್ಷನ್ ಐ.ಪಿ. 5ಐಯು/1ಎಂಎಲ್ ; ಮಾರ್ಟಿನ್ ಆಯಂಡ್ ಬ್ರೌನ್ ಕಂಪನಿಯ ಕ್ಯಾಲ್ಸಿಯಂ ಗ್ಲುಕೋನೇಟ್ ಇಂಜೆಕ್ಷನ್; ಲೈಫ್ ಮ್ಯಾಕ್ಸ್ ಕ್ಯಾನ್ಸರ್ ಲ್ಯಾಬ್‌ನ ಕ್ಯಾಲ್ಸಿಯಂ 500 ಎಂಜಿ ಮತ್ತು ವಿಟಮಿನ್ ಡಿ3 250 ಐಯು ಮಾತ್ರೆ ಸೇರಿದಂತೆ 71 ಔಷಧಿಗಳು ಕಳಪೆ ಎಂದು ವರದಿಯಲ್ಲಿ ತಿಳಿಸಲಾಗಿದೆ.