Ad imageAd image

ಕೆಮಿಕಲ್ ಫ್ಯಾಕ್ಟರಿ ಬಾಯ್ಲರ್ ಸ್ಪೋಟ : 8 ಜನ ದುರ್ಮರಣ

Bharath Vaibhav
ಕೆಮಿಕಲ್ ಫ್ಯಾಕ್ಟರಿ ಬಾಯ್ಲರ್ ಸ್ಪೋಟ : 8 ಜನ ದುರ್ಮರಣ
WhatsApp Group Join Now
Telegram Group Join Now

ಮುಂಬೈ :  ಕೆಮಿಕಲ್ ಫ್ಯಾಕ್ಟರಿಯೊಂದರಲ್ಲಿ ದೊಡ್ಡ ದುರಂತ ನಡೆದುಹೋಗಿದೆ. ಥಾಣೆಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟಗೊಂಡು 8 ಜನ ಸಾವನ್ನಪ್ಪಿದ್ದಾರೆ.. ದುರಂತದಲ್ಲಿ 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವಿಲಿ ಎಂಬಲ್ಲಿ ಈ ಕೆಮಿಕಲ್ ಫ್ಯಾಕ್ಟರಿ ಇದೆ.ಇದರಲ್ಲಿನ ಬಾಯ್ಲರ್ ಸ್ಫೋಟಗೊಂಡಾಗ ದಟ್ಟವಾದ ಹೊಗೆ ಆವರಿಸಿದೆ.. ಒಳಗಿದ್ದವರಿಗೆ ಏನೂ ಕಾಣಿಸಿಲ್ಲ. ನಂತರ ಸ್ಫೋಟದ ಶಬ್ದ ಕೇಳಿಸಿದೆ.

ಈ ಬಾಯ್ಲರ್ ಸ್ಫೋಟದ ಶಬ್ಧ ಸುಮಾರು 3 ಕಿಲೋ ಮೀಟರ್​​ವರೆಗೆ ಕೇಳಿಸಿದೆ ಎನ್ನಲಾಗಿದೆ. ತಕ್ಷಣ ಜಾಗೃತರಾದ ಸ್ಥಳೀಯರು ಅಗ್ನಿ ಶಾಮಕ ಸಿಬ್ಬಂದಿಗೆ ಹಾಗೂ ಆಸ್ಪತ್ರೆಗೆ ಮಾಹಿತಿ ತಿಳಿಸಿದ್ದಾರೆ.ಅಂಬರ ಕೆಮಿಕಲ್ ಕಂಪನಿಯ 4 ಬಾಯರ್​​ಗಳು ಸ್ಫೋಟಗೊಂಡ ಪರಿಣಾಮ ಭಾರೀ ಬೆಂಕಿ ಕಾಣಿಸಿಕೊಂಡಿತ್ತು.

WhatsApp Group Join Now
Telegram Group Join Now
Share This Article
error: Content is protected !!