
ಖ್ಯಾತ ಗಾಯಕಿ ಆಷಾ ಬೋಸ್ಲೆ ಪ್ರಸಿದ್ದ ಗಾಯಕಿಯಾಗಿ ಜಗತಿನಾದ್ಯಂತ ಹೆಸರು ಮಾಡಿದವರು. ಈಚೆಗೆ ನಿಧನರಾದ ಆಷಾ ತಮ್ಮ ಗಾಯನ (ಹಾಡುಗಾರಿಕೆ) ವೃತ್ತಿ ಬದುಕಿನೂದ್ದಕ್ಕೂ ಇನ್ನೋರ್ವ ಶ್ರೇಷ್ಠ ಗಾಯಕಿ ಲತಾ ಮಂಗೇಶಕರ ನೆರಳಿನ ಮರೆಯಲ್ಲಿದ್ದರೂ ಪ್ರಸಿದ್ದ ಗಾಯಕಿ ಎಂದು ಕರೆಯಿಸಿಕೊಂಡರು.
ಭಾರತದ ಸುಮಾರು ೨೦ ಭಾಷೆಗಳಲ್ಲಿ ಹಾಡಿದ ಆಷಾ ಬೋಸ್ಲೆ ಅವರು ೧೨೦೦೦ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಆಷಾ ಇನ್ನೋರ್ವ ಸರ್ವಶ್ರೇಷ್ಠ ಗಾಯಕಿ ಲತಾ ಮಂಗೇಶಕರ ಸಮಕಾಲಿನವರಾಗಿರದಿದ್ದರೆ ಆಷಾ ಬೋಸ್ಲೆ ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತಿದ್ದರೆಂಬುದರಲ್ಲಿ ಎರಡು ಮಾತಿಲ್ಲ.
ಜಗತ್ತಿನ ಸರ್ವಶ್ರೇಷ್ಠರು ಒಂದೇ ಕಾಲಮಾನದಲ್ಲಿ ಬದುಕಿ ತಮ್ಮ ವೃತ್ತಿ ಬದುಕನ್ನೂ ಹಾಡುಗಾರಿಕೆಯಲ್ಲಿ ಕಳೆದರು. ಲತಾ ಹಾಗೂ ಆಷಾ ಹಾಡಿಗಾರಿಕೆಯ ವಿಷಯ ಬಂದಾಗ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ ಭಾಸವಾಗುತ್ತಿದ್ದರು.




