ಕಾಳಗಿ : ಏ. 14ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಆಚರಣೆ ಮಾಡಲಾಯಿತು.
ಇದೆ ವೇಳೆ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪಂಚಶೀಲ ಮತ್ತು ನೀಲಿ ಧ್ವಜಾರೋಹಣದ ನಂತರ ಬುದ್ಧ ವಂದನೆ ಹೇಳುವ ಮೂಲಕ ಕಾರ್ಯಕ್ರಮ ಚಾಲನೆ ನೀಡಲಾಯಿತು, ಇದೆ ವೇಳೆ ಮಾತನಾಡಿದ ಪೃಥ್ವಿರಾಜ ಪಾಟೀಲ್ ತಸೀಲ್ದಾರ್ ಕಾಳಗಿ ಹಾಗೂ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ್ ಡಿಗ್ಗಿ ಮತ್ತು ಶಂಕರ್ ಮಂಗಲಗಿ ಸಿಆರ್ ಪಿ ಅವರು ಬಾಬಾ ಸಾಹೇಬ ಅಂಬೇಡ್ಕರ್ ರವರ ಕುರಿತು ಮಾತನಾಡಿದರು, ಇದೆ ಸಂದರ್ಭದಲ್ಲಿ ತಾಲೂಕ ಜಯಂತಿ ಸಮಿತಿ ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳು ಸೇರಿದಂತೆ,ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ದಲಿತ ಮುಖಂಡರು ಮತ್ತು ಅನೇಕ ಗಣ್ಯರು, ಸಾರ್ವಜನಿಕರು ಹಾಗೂ ಅಭಿಮಾನಿಗಳು ಭಾಗವಹಿಸಿ ಡಾ. ಅಂಬೇಡ್ಕರ್ ಅವರಿಗೆ ಭಕ್ತಿ ಪೂರ್ವಕವಾಗಿ ಗೌರವ ಸಲ್ಲಿಸಿದರು.
ವರದಿ : ಹಣಮಂತ ಕುಡಹಳ್ಳಿ




