Ad imageAd image

ಬಾಗೇಪಲ್ಲಿ ಪಟ್ಟಣದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಸ್ವಾಗತರ್ಹ ವಿಚಾರ : ಸಿ.ಮುನಿರಾಜು

Bharath Vaibhav
ಬಾಗೇಪಲ್ಲಿ ಪಟ್ಟಣದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಸ್ವಾಗತರ್ಹ ವಿಚಾರ : ಸಿ.ಮುನಿರಾಜು
WhatsApp Group Join Now
Telegram Group Join Now

ಬಾಗೇಪಲ್ಲಿ : ಡಾ.ಬಿ.ಆರ್.ಅಂಬೇಡ್ಕರ್ ರವರು ಒಂದು ಜಾತಿಗೆ, ಒಂದು ಪಕ್ಷಕ್ಕೆ ಸೀಮಿತವಾದ ವ್ಯಕ್ತಿಯಲ್ಲ, ಬದಲಿಗೆ ಎಲ್ಲಾ ಜಾತಿಯವರು, ಅವರ ಆದರ್ಶಗಳನ್ನು ಪಾಲನೆ ಮಾಡಿ, ಅವರನ್ನು ಗೌರವಿಸಬೇಕೆಂದು ಭಾರತೀಯ ಜನತಾ ಪಕ್ಷದ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜುರವರು ತಿಳಿಸಿದ್ದರು.

ಈ ವೇಳೆಯಲ್ಲಿ ಅವರು ಮಾತನಾಡಿ ನರೇಂದ್ರ ಮೋದಿಯವರು ಇಡೀ ವಿಶ್ವಕ್ಕೆ ಅಂಬೇಡ್ಕರ್ ರವರ ಆದರ್ಶಗಳನ್ನು ಸಾರಿದ್ದರು. ಬಾಗೇಪಲ್ಲಿ ಪಟ್ಟಣದಲ್ಲಿ ಸರ್ಕಾರದಿಂದ ಅಂಬೇಡ್ಕರ್ ಭವನಕ್ಕೆ ಗುದ್ದಲಿ ಪೂಜೆ ಮಾಡಿ ಭವ್ಯ ಅಂಬೇಡ್ಕರ್ ಭವನ ನಿರ್ಮಾಣಮಾಡುತ್ತಿರುವುದು ಸ್ವಾಗತರ್ಹ ವಿಚಾರವಾಗಿದೆ,ಅದ್ದರಿಂದ ಸಮಸ್ತ ಜನರಿಗೆ ಡಾ.ಬಿ.ಆರ್.ಅಂಬೇಡ್ಕರ್ ರವರ 135 ನೇ ಜಯಂತಿಯ ಶುಭಾಶಯಗಳು ತಿಳಿಸುತ್ತೆನೆ ಎಂದರು.

ಬಾಗೇಪಲ್ಲಿ ಪಟ್ಟಣದ ತಾಲ್ಲೂಕು ಕಛೇರಿ ಪಕ್ಕದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ರವರ ಪುತ್ತಳಿಗೆ ಪಕ್ಷದ ಎಸ್.ಸಿ ಮೋರ್ಚಾ ಮತ್ತು ಎಸ್.ಟಿ.ಮೊರ್ಚಾದವತಿಯಿಂದ ಮಾಲಾರ್ಪಣೆ ಮಾಡಿ ಗೌರವಿಸಿದ್ದರು.ನಂತರ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿರುವ ವಾಲ್ಮೀಕಿ ಪುತಳಿಗೆ ಮಾಲಾರ್ಪಣೆ ಮಾಡಿದ್ದರು. ಬಿಜೆಪಿ ಪಕ್ಷದ ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದರು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷ ಆರ್.ಪ್ರತಾಪ್, ಎಸ್.ಸಿ ಮೊರ್ಚಾ ವೆಂಕಟೇಶ್, ಚಿಕ್ಕಪೂಜಪ್ಪ, ಕೆ.ಟಿ.ವಿರಾಂಜನೆಯ, ಶ್ರೀನಿವಾಸ್, ಸೇರಿದಂತೆ ನೂರಾರು ಜನರು ಹಾಜರಿದ್ದರು.

ವರದಿ: ಬಿ.ಎ.ಬಾಬಾಜಾನ್

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!