ನವದೆಹಲಿ : ಡಿಹೈಡ್ರೇಷನ್ ನಿಂದ ಬಳಲುತ್ತಿದ್ದ ಭಾರತದ ಕುಸ್ತಿಪಟು ವಿನೇಶ್ ಪೋಗಟ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ನಿರ್ಜಲೀಕರಣದಿಂದಾಗಿ ಪ್ಯಾರಿಸ್ ನ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಫೈನಲ್ ಗೆ ಮುಂಚಿತವಾಗಿ ಅಧಿಕ ತೂಕ ಹೊಂದಿರುವುದು ಕಂಡುಬಂದ ನಂತರ ಏಸ್ ಕುಸ್ತಿಪಟುವನ್ನು ಈ ಹಿಂದೆ ಒಲಿಂಪಿಕ್ಸ್ ನಿಂದ ಅನರ್ಹಗೊಳಿಸಲಾಗಿತ್ತು.ಮಂಗಳವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಗೆದ್ದ ನಂತರ ವಿನೇಶ್ ಫೋಗಟ್ ಚಿನ್ನ ಗೆಲ್ಲುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿತ್ತು.
ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ರಾತ್ರಿಯಿಡೀ ವರ್ಕೌಟ್ ಮಾಡಿದ್ದರೂ ಪ್ರಯೋಜನವಾಗಲಿಲ್ಲ. ಜಸ್ಟ್ 100 ಗ್ರಾಂ ತೂಕ ಹೆಚ್ಚಿದ್ದಕ್ಕೆ ಅವರನ್ನು ಒಲಂಪಿಕ್ಸ್ ನಿಂದ ಅನರ್ಹತೆಗೊಳಿಸಲಾಗಿದೆ.