ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ವಕ್ಫ್ ಬೋರ್ಡ್ ಆಸ್ತಿ ವಿವಾದವು ಬೂದಿ ಮುಚ್ಚಿದ ಕೆಂಡದಂತಿದೆ. ರೈತರ ಜಮೀನು, ಮಠ-ಮಾನ್ಯಗಳ ಆಸ್ತಿಯೂ ವಕ್ಫ್ ಬೋರ್ಡ್ ಆಸ್ತಿ ಎಂದು ಪಹಣಿಯಲ್ಲಿ ನಮೂದು ಆಗಿದ್ದು ರಾಜಕೀಯ ತಿಕ್ಕಾಟ, ರೈತರ ಹೋರಾಟಕ್ಕೆ ಕಾರಣವಾಗಿದೆ.
ವಕ್ಫ್ ಬೊರ್ಡ್ ಆಸ್ತಿ ವಿವಾದವು ವಿಜಯಪುರ ಜಿಲ್ಲೆಯಿಂದ ಆರಂಭಗೊಂಡ ನಂತರದಲ್ಲಿ ತೀವ್ರವಾಗಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದ ಬಿಜೆಪಿಯು, ಇದೀಗ ಸಹಾಯವಾಣಿ ಸಂಖ್ಯೆಯನ್ನು ಆರಂಭಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ವಕ್ಫ್ ಬೋರ್ಡ್ನಿಂದ ನೀವು ಸಮಸ್ಯೆ ಅನುಭವಿಸುತ್ತಿದ್ದರೆ 9035675734ಗೆ ವಾಟ್ಸಾಪ್ ಮೂಲಕ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.
ಈ ನಂಬರ್ಗೆ ಕರೆ ಮಾಡಿ, ಮಾಹಿತಿ ಕೊಡಿ. ನಿಮ್ಮ ಜಿಲ್ಲೆಗೂ ಬರುತ್ತೇವೆ, ನಿಮಗೆ ನ್ಯಾಯ ಕೊಡಿಸುತ್ತೇವೆ ಎಂದು ಪ್ರತಾಪ್ ಸಿಂಹ ಬರೆದುಕೊಂಡಿದ್ದಾರೆ.
ಇನ್ನು ರೈತರಿಗೆ ಕೊಟ್ಟ ನೋಟಿಸ್ ವಾಪಸ್ ಪಡೆಯುತ್ತೇವೆ. ರೈತರನ್ನು ಒಕ್ಕಲೆಬ್ಬಿಸಲ್ಲ ಎಂದು ಸರ್ಕಾರವು ವಿವಾದ ಭುಗಿಲೇಳುತ್ತಿದ್ದಂತೆ ಈಗಾಗಲೇ ಸ್ಪಷ್ಟನೆಯೂ ನೀಡಿತ್ತು.