ರಾಯಚೂರು : ಯಾರಾದರೂ ಪಾಕಿಸ್ತಾನ ಜಿಂದಾಬಾದ್ ಎಂದರೆ ನಮಗೆ ತಿಳಿಸಿ ನಾವು ಅವರನ್ನು ಗಲಿಗೇರಿಸಲ್ಲ ಬದಲಾಗಿ ಗುಂಡಿಕ್ಕಿ ಕೊಲ್ಲುತ್ತೆವೆ ಎಂದು ಸಚಿವ ಜಮೀರ್ ಅಹ್ಮದ್ ತಿಳಿಸಿದರು.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಮಾತನಾಡಿದ ಅವರು, ಪಾಕಿಸ್ತಾನ್ ಜಿಂದಾಬಾದ್ ಅಂದರೆ ತಿಳಿಸಿ, ಗುಂಡು ಹಾರಿಸುತ್ತೇವೆ.ಸರ್ಕಾರಕ್ಕೆ ತಿಳಿಸಿ ಅವರನ್ನು ಗಲ್ಲಿಗೇರಿಸಲ್ಲ ನಾವೇ ಗುಂಡಿಕ್ಕಿ ಸಾಯಿಸುತ್ತೇವೆ. ಎಂದು ಸಚಿವ ಜಮೀರ್ ಹೇಳಿಕೆ ನೀಡಿದರು.
ಅಂತವರು ಯಾರಾದರೂ ಘೋಷಣೆ ಕೂಗಿದರೆ ನಾವೇ ಡಿಶುಂ ಡಿಶುಂ ಅಂತ ಗುಂಡಿಕ್ಕಿ ಕೊಲ್ಲುತ್ತೆವೆ. ಬಿಜೆಪಿ ಅವರಿಗೂ ಈ ತರದ್ದೇ ಬೇಕು ಅಲ್ವಾ? ಬಿಜೆಪಿಯವರಿಗೆ ಒಟ್ಟಿನಲ್ಲಿ ಅಧಿಕಾರಕ್ಕೆ ಬರಬೇಕು ಎಂದು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸಚಿವ ಜಮೀರ್ ಅಹ್ಮದ್ ಹೇಳಿಕೆ ನೀಡಿದರು.