ಭಾರತದ ಯುವಜನತೆಯಲ್ಲಿ ಹೆಚ್ಚುತ್ತಿರುವ ಡಿಜಿಟಲ್ ವ್ಯಸನ ಕೇವಲ ಒಂದು ಹವ್ಯಾಸವಲ್ಲ, ಅದೊಂದು ಗಂಭೀರ ಸಾಮಾಜಿಕ ಮತ್ತು ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ.
ಡಿಜಿಟಲ್ ಸಾಧನಗಳ (ಸ್ಮಾರ್ಟ್ಫೋನ್, ಲ್ಯಾಪ್ಟಾಪ್) ಅಥವಾ ಆನ್ಲೈನ್ ಚಟುವಟಿಕೆಗಳ (ಸೋಷಿಯಲ್ ಮೀಡಿಯಾ, ಗೇಮಿಂಗ್) ಮೇಲಿನ ಅತಿಯಾದ ಮತ್ತು ನಿಯಂತ್ರಿಸಲಾಗದ ಅವಲಂಬನೆಯನ್ನು ಡಿಜಿಟಲ್ ವ್ಯಸನ ಎನ್ನಲಾಗುತ್ತದೆ.ಇದು ವ್ಯಕ್ತಿಯ ದೈನಂದಿನ ಕೆಲಸ, ಶಿಕ್ಷಣ ಮತ್ತು ಮಾನಸಿಕ ನೆಮ್ಮದಿಗೆ ಅಡ್ಡಿಪಡಿಸುತ್ತದೆ.
ಭಾರತದ ಯುವಜನತೆಯಲ್ಲಿ ಅಪಾಯಕಾರಿ ‘ಡಿಜಿಟಲ್ ವ್ಯಸನ’ ಹೆಚ್ಚುತ್ತಿದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಹೌದು, ಭಾರತದ ಯುವಜನತೆಯಲ್ಲಿ ಹೆಚ್ಚುತ್ತಿರುವ ಡಿಜಿಟಲ್ ವ್ಯಸನದ ಬಗ್ಗೆ ಗಂಭೀರ ಎಚ್ಚರಿಕೆ ನೀಡಿದೆ.




