Ad imageAd image

ಯುದ್ಧಕಾಲದಲ್ಲಿ ಮಿತವಾಗಿ ಗ್ಯಾಸ್ ಸಿಲಿಂಡರ್ ಬಳಸಬೇಕು : ಕೆ.ಎಚ್ ಮುನಿಯಪ್ಪ

Bharath Vaibhav
ಯುದ್ಧಕಾಲದಲ್ಲಿ ಮಿತವಾಗಿ ಗ್ಯಾಸ್ ಸಿಲಿಂಡರ್ ಬಳಸಬೇಕು : ಕೆ.ಎಚ್ ಮುನಿಯಪ್ಪ
WhatsApp Group Join Now
Telegram Group Join Now

ಬೆಂಗಳೂರು : ಸಿಲಿಂಡರ್ ವಿಚಾರವಾಗಿ ಯಾರು ಆತಂಕ ಪಡುವ ಅಗತ್ಯ ಇಲ್ಲ ಒಂದು ಕುಟುಂಬಕ್ಕೆ ತಿಂಗಳಿಗೆ ಒಂದು ಸಿಲಿಂಡರ್ ಕೊಡಲು ತೀರ್ಮಾನಿಸಲಾಗಿದೆ ಯುದ್ಧ ನಡೆಯುತ್ತಿರುವಾಗ ಎಲ್ಲಾ ಗ್ರಹಕರು ಸಹಕರಿಸಬೇಕು ಕಲ್ಯಾಣ ಮಂಟಪದವರು ಸೇರಿ ಎಲ್ಲರೂ ಸಹಕರಿಸಿ ಎಂದು ವಿಧಾನಸಭೆಯಲ್ಲಿ ಆಹಾರ ಸಚಿವ ಕೆ.ಎಚ್ ಎಸ್ ಮುನಿಯಪ್ಪ ಹೇಳಿಕೆ ನೀಡಿದರು.

ಮದುವೆ ನಿಲ್ಲಿಸಿ ಬಿಡಬೇಕು ಎಂದು ಬಿಜೆಪಿ ಶಾಸಕ ಸುರೇಶ ಗೌಡ ಇದೇ ಸಂದರ್ಭದಲ್ಲಿ ಹೇಳಿದರು. ಬಳಿಕ ಮುನಿಯಪ್ಪ ಗ್ಯಾಸ್ ವ್ಯರ್ಥ ಮಾಡಬೇಡಿ ಎಲ್ಲರೂ ಸಹಕರಿಸಬೇಕು.

ಆಯಿಲ್ ಕಂಪನಿ ಜೊತೆಗೆ ನಾನು ಬೆಳಿಗ್ಗೆ ಸಭೆ ಮಾಡಿದ್ದೇನೆ. ಶೇ.20 ರಿಂದ 30ರಷ್ಟು ನಮ್ಮ ಉತ್ಪಾದನೆ ಇದೆ ಶೇಕಡ 70% ರಷ್ಟು ವಿದೇಶಿ ದಿಂದ ಬರಬೇಕು ನಾಲ್ವರ ಕುಟುಂಬಕ್ಕೆ ತಿಂಗಳಿಗೆ ಒಂದು ಗ್ಯಾಸ್ ಸಾಕು ಅಂದಿದ್ದಾರೆ.

ಯಾರು ಆತಂಕ ಪಡುವ ಅಗತ್ಯವಿಲ್ಲ. ಆಸ್ಪತ್ರೆಗಳು ಶಾಲೆಗಳಿಗೆ ವಾಣಿಜ್ಯ ಸಿಲಿಂಡರ್ ಕೊಡಬೇಕು. ಹೋಟೆಲ್, ಕಲ್ಯಾಣ ಮಂಟಪದವರು ಸಹಕಾರ ನೀಡಬೇಕು.

ನಾವು ಮುಖ್ಯವಾಗಿ ಗ್ರಾಹಕರ ಬಗ್ಗೆ ಗಮನ ಹರಿಸಬೇಕು. ಯುದ್ಧಕಾಲದಲ್ಲಿ ಮಿತವಾಗಿ ಗ್ಯಾಸ್ ಸಿಲಿಂಡರ್ ಬಳಸಬೇಕು ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಹೇಳಿಕೆ ನೀಡಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!